ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಗ್ಗೇಶ್ 'ತೋತಾಪುರಿ' ಟ್ರೈಲರ್ ಹೆಂಗೈತೆ ಗೊತ್ತೇ ?

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಚಿತ್ರದ ನಿರೀಕ್ಷೆ ಹೆಚ್ಚುತ್ತಲೇ ಇದೆ. ನಿರ್ದೇಶಕ ವಿಜಯ್ ಪ್ರಸಾದ್ ಕಲ್ಪನೆಯ ಈ ಚಿತ್ರ ಮೇಲ್ನೋಟಕ್ಕೆ ಹಾಸ್ಯಭರಿತ ಚಿತ್ರ ಅನಿಸಿದರೂ ಕೂಡ ಈಗ ಬಿಟ್ಟಿರೋ ಟ್ರೈಲರ್ ಬೇರೆನೆ ಹೇಳ್ತಾಯಿದೆ.ಬನ್ನಿ, ಹೇಳ್ತಿವಿ.

ತೋತಾಪುರಿ ಚಿತ್ರದದಲ್ಲಿ ತಾರಾ ಬಳಗ ದೊಡ್ಡದೇ ಇದೆ. ಇಲ್ಲಿ ಬರೋ ಪಾತ್ರಗಳ ಪೋಷಣೆಯಲ್ಲೂ ಹೊಸತನದ ಫೀಲ್ ಇದೆ. ಹೀಗಿರೋ ಈ ಚಿತ್ರದಲ್ಲಿ ಜಾತಿ-ಧರ್ಮಗಳ ತಾಕಲಾಟದ ಚಿತ್ರಣವೂ ಇದ್ದಂತೆ ಕಾಣ್ತಾಯಿದೆ. ಹಾಸ್ಯದ ಜೊತೆ ಜೊತೆಗೆ ಡಬಲ್ ಮೀನಿಂಗ್ ಫೀಲ್ ಕೊಡುವ ಡೈಲಾಗ್‌ಗಳು ಹೇರಳವಾಗಿಯೇ ಇದ್ದಂತಿದೆ.

ಅಂದ್ಹಾಗೆ ಈ ಚಿತ್ರದ ಟ್ರೈಲರ್‌ ನಲ್ಲಿ ಇಡೀ ಚಿತ್ರದ ಎಲ್ಲ ಪಾತ್ರಗಳ ಝಲಕ್ ಕೂಡ ಇದೆ. ಆಯಾ ಪಾತ್ರದ ಮಾತಿನ ದಾಟಿ ಮತ್ತು ಕಿಕ್ ಇಲ್ಲಿ ನೋಡುಗರಿಗೆ ಮಜಾ ಕೊಡ್ತಾ ಇವೆ. ಸದ್ಯಕ್ಕೆ ಚಿತ್ರದ ಟ್ರೈಲರ್ ಬಿಟ್ಟಿರೋ ನಿರ್ಮಾಪಕರು ರಿಲೀಸ್ ಡೇಟ್ ಅನ್ನ ಇನ್ನೂ ಪ್ಲಾನ್ ಮಾಡಿಲ್ಲ. ಅದಕ್ಕೂ ಮೊದಲೇ ಈ ಟ್ರೈಲರ್ ಮೂಲಕ ಜನಕ್ಕೆ ಸಖತ್ ಹಾಸ್ಯದ ಕಿಕ್ ಕೊಡ್ತಾಯಿದ್ದಾರೆ.

Edited By :
PublicNext

PublicNext

21/04/2022 04:06 pm

Cinque Terre

110.52 K

Cinque Terre

2