ಬಾಂಗ್ಲಾದೇಶ: ಎಲ್ಲೋ ಇದ್ದು ಇನ್ನೆಲ್ಲೋ ಬದುಕಿದ್ದ ರಾತ್ರೋ ರಾತ್ರಿ ಸ್ಟಾರ್ ಆದ ಗಾಯಕಿ ರಾನು ಮೊಂಡಲ್ ಮತ್ತೆ ಸುದ್ದಿಯಲ್ಲಿಯೇ ಇದ್ದಾರೆ. ಮುಂಬೈನಂತ ನಗರದಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ರಾನು ಈಗ ಬಾಂಗ್ಲಾ ದೇಶಕ್ಕೂ ಕಾಲಿಟ್ಟಿದ್ದಾರೆ.
ಹೌದು. ಗಾಯಕಿ ರಾನು ಮೊಂಡಲ್ ಬಂದಷ್ಟೇ ಬೇಗ ಕಳೆದೇ ಹೋಗಿದ್ದರು. ಏನೇನೋ ಮಾಡಿಕೊಂಡು ಇನ್ನೇನೋ ಆಗಿ ಗಳಿಸಿದ್ದ ನೇಮ್-ಫೇಮ್ ಅನ್ನೂ ಕಳೆದುಕೊಂಡರು. ಆದರೆ, ಈಗ ಅದೇ ರಾನು ಮೊಂಡಲ್ ಬಾಂಗ್ಲಾ ದೇಶಕ್ಕೆ ಹೋಗಿದ್ದಾರೆ.
ಇಲ್ಲಿಯ ಸೂಪರ್ ಸ್ಟಾರ್ ಅಲೋಮ್ ಅವರೊಂದಿಗೆ ಗಾಯಕಿ ರಾನು ಮೊಂಡಲ್ ಬಾಂಗ್ಲಾ ಭಾಷೆಯಲ್ಲಿಯೇ
ವಿಶೇಷ ಹಾಡೊಂದನ್ನ ಹಾಡಿದ್ದಾರೆ. ಈ ಒಂದು ಹಾಡಿನ ವೀಡಿಯೋ ಈಗ ಹೆಚ್ಚು ಗಮನ ಸೆಳೆಯುತ್ತಿದೆ. ಹಾಗೇನೆ ರಾನು ಜೊತೆಗೆ ಹಾಡುವುದಾಗಿಯೇ ಫೇಸ್ ಬುಕ್ ನಲ್ಲಿ ಸೂಪರ್ ಸ್ಟಾರ್ ಅಲೋಮ್ ಹೇಳಿಕೊಂಡಿದ್ದರು. ಅದರಂತೆ ಈಗ ಅಲೋಮ್ ಹಾಡಿ ಖುಷಿಪಟ್ಟಿದ್ದಾರೆ.
PublicNext
20/04/2022 10:40 pm