ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಳಿಪಟದ ಪೋಲಿ ಹುಡುಗರ ಮಸ್ತ್ ಮಜಾ !

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಗಾಳಿಪಟ-2ದಲ್ಲಿ ಗಣೇಶ್, ದಿಗಂತ್ ಮತ್ತು ಪವನ್ ಕುಮಾರ್ ಅಭಿನಯಿಸಿದ್ದು, ಇಲ್ಲೂ ಭಾರಿ ಎಂಟರೈನಮೆಂಟ್ ಕೊಡೋ ಹಾಗೇನೆ ಕಾಣ್ತಿದ್ದಾರೆ. ಮಜವಾದ ಈ ಟೀಸರ್ ಇಲ್ಲಿದೆ ನೋಡಿ.

ಗಾಳಿಪಟ ಭಾಗ ಒಂದರಲ್ಲಿ ಗಾಯಕ ರಾಜೇಶ್‌ ಕೃಷ್ಣನ್ ಅಭಿನಯಿಸಿದ್ದರು. ಆದರೆ, ಗಾಳಿಪಟ-2 ರಲ್ಲಿ ಪವರ್ ಕುಮಾರ್ ಇದ್ದಾರೆ.ಗಣಿ,ದಿಗ್ಗು,ಪವನ್ ಇವರೆಲ್ಲ ಸೇರಿ ಯೋಗರಾಜ್ ಭಟ್ಟರ ಚಿತ್ರಕ್ಕೆ ಬೇರೆ ಲೆವಲ್‌ನ ಹಾಸ್ಯವನ್ನೇ ಕೊಟ್ಟಂತಿದೆ.

ಇದೇ ಏಪ್ರಿಲ್-21 ರಂದು ಚಿತ್ರದ ಹಾಡೊಂದು ರಿಲೀಸ್ ಆಗುತ್ತಿದೆ. ಅರ್ಜುನ್ ಜನ್ಯ ಸಂಗೀತದಲ್ಲಿಯೇ ಈ ಹಾಡು ಮೂಡಿ ಬಂದಿದೆ. ಗಾಳಿಪಟ-ಭಾಗ 1ರಲ್ಲೂ ಒಳ್ಳೆ ಹಾಡುಗಳೇ ಇದ್ದವು. ಇಲ್ಲೂ ಉತ್ತಮ ಹಾಡುಗಳೇ ಇರುತ್ತವೆ ಎಂಬ ನಿರೀಕ್ಷೆನೂ ಇದೆ.

Edited By :
PublicNext

PublicNext

19/04/2022 11:32 am

Cinque Terre

52.86 K

Cinque Terre

0