ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಕಟ್ಟ ಕಡೆ ಚಿತ್ರ ಜೇಮ್ಸ್ ರಿಲೀಸ್ ಆಗಿದೆ. ಇದು ಎಲ್ಲರಿಗೂ ಗೊತ್ತಿದೆ. ಆದರೆ, ಪುನೀತ್ ಕಂಠಸಿರಿ ಅವರ ಪಾತ್ರಕ್ಕಿಲ್ಲವೇ ಇಲ್ಲ ಅಂತಲೇ ಅಭಿಮಾನಿಗಳು ಕೊಂಚ ಫೀಲ್ ಆಗಿದ್ದರು. ಈಗ ಆ ಫೀಲ್ ಬಿಟ್ಟು ಫ್ಯಾನ್ಸ್ ಮತ್ತೆ ಜೇಮ್ಸ್ ಸಿನಿಮಾ ನೋಡಬಹುದು. ಹೇಗಂತಿರೋ ? ಬನ್ನಿ, ಹೇಳ್ತಿವೆ.
ಜೇಮ್ಸ್ ಚಿತ್ರದ ಪುನೀತ್ ಪಾತ್ರಕ್ಕೆ ಪುನೀತ್ ವಾಯ್ಸ್ ಕೊಟ್ಟಿದ್ದಾರೆ. ಇದೆಲ್ಲ ಟೆಕ್ನಾಲಜಿಯಿಂದಲೇ ಸಾಧ್ಯವಾಗಿದೆ. ಹೈದ್ರಾಬಾದ್‌ನ ಬಿಟ್ ಮಂತ್ರ ಕಂಪನಿ ಈ ಒಂದು ಕೆಲಸ ಮಾಡಿದೆ.ನಟ ಪ್ರಭಾಸ್ ಇನ್‌ವೆಸ್ಟ್ ಮಾಡಿರೋ ಈ ಕಂಪನಿಯ ಪ್ರತಿಭಾವಂತ ಇಂಜಿನಿಯರ್ ಪಪ್ಪು ಈ ಒಂದು ಅದ್ಭುತ ಕೆಲಸ ಮಾಡಿದ್ದಾರೆ.
ಪುನೀತ್ ಮಾತನಾಡಿರೋ ಸುಮಾರು 15 ಗಂಟೆಯ ಪುಟೇಜ್ ಅನ್ನ ಆಧಾರವಾಗಿಟ್ಟುಕೊಂಡೇ ಇಂಜಿನಿಯರ್ ಪಪ್ಪು ಅಪ್ಪು ವಾಯ್ಸ್ ಅನ್ನ Re-Creat ಮಾಡಿದ್ದಾರೆ. ಅದರ ಫಲವೇ ಜೇಮ್ಸ್ ಚಿತ್ರಕ್ಕೆ ಅಪ್ಪು ವಾಯ್ಸ್ ಬಳಕೆ ಮಾಡಲು ಸಾಧ್ಯವಾಗಿದೆ.
ಈ ಕುರಿತು ಚಿತ್ರದ ನಿರ್ದೇಶಕ ಬಹದ್ದೂರ್ ಚೇತನ್ PublicNext ಗೆ ಅಧಿಕೃತ ಮಾಹಿತಿ ಕೊಟ್ಟಿದ್ದಾರೆ. ಉಳಿದಂತೆ ಇದೇ ಏಪ್ರಿಲ್-22 ರಂದು ಜೇಮ್ಸ್ ಚಿತ್ರ ರೀರಿಲೀಸ್ ಆಗುತ್ತಿದೆ.
PublicNext
18/04/2022 02:49 pm