ದಾವಣಗೆರೆ: ಸಿನಿರಸಿಕರಲ್ಲಿ ಕ್ರೇಜ್ ಕ್ರಿಯೇಟ್ ಮಾಡಿದ್ದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ -2 ಬಿಡುಗಡೆಯಾಗಿದ್ದು, ಯಶ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮ ತಂದಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಫಿಲ್ಮ್ ದಾವಣಗೆರೆಯ ಗೀತಾಂಜಲಿ, ಅಶೋಕ ಚಿತ್ರಮಂದಿರದಲ್ಲಿ ತೆರೆ ಕಂಡಿದ್ದು, ಟಿಕೆಟ್ ಗಳು ಬಹುತೇಕ ಸೋಲ್ಡೌಟ್ ಆಗಿವೆ. ಬೆಳಿಗ್ಗೆ ನಾಲ್ಕು ಗಂಟೆಗೆ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ಬೆಳ್ಳಂಬೆಳಿಗ್ಗೆ ಬಂದು ಚಿತ್ರ ವೀಕ್ಷಿಸಿದರು. ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ನಟನೆಗೆ ಫುಲ್ ಫಿದಾ ಆಗಿದ್ದಾರೆ.
ದಾವಣಗೆರೆಯ ಯಶ್ ಅಭಿಮಾನಿಗಳಿಂದ ಕೆಜಿಎಫ್ 2 ರಿಲೀಸ್ ದಿನವನ್ನು ಹಬ್ಬದಂತೆ ಆಗಿದ್ದು, ಅಶೋಕ ಹಾಗೂ ಗೀತಾಂಜಲಿ ಚಿತ್ರಮಂದಿರದ ಮುಂಭಾಗ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಬೆಳಗ್ಗೆ 4 ಗಂಟೆಗೆ ಮೊದಲ ಶೋ ಪ್ರಾರಂಭ ಆಗಿದ್ದು, ಪಟಾಕಿ ಸಿಡಿಸಿ ಯಶ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಸಂಭ್ರಮಾಚರಣೆ ಮಾಡಿದರು.
ದಾವಣಗೆರೆ ನಗರದ ಅಶೋಕ ಚಿತ್ರ ಮಂದಿರದ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದು, ಟಿಕೆಟ್ ಸಿಗದವರು ನಿರಾಸೆ ಅನುಭವಿಸಿದರು. ದಾವಣಗೆರೆಯ ಅಶೋಕ ಚಿತ್ರಮಂದಿರ, ಗೀತಾಂಜಲಿ, ಮೋವಿ ಟೈಮ್ ನಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಭಾನುವಾರದವರೆಗೂ ಎಲ್ಲ ಚಿತ್ರ ಮಂದಿರಗಳಲ್ಲಿಯೂ ಟಿಕೆಟ್ ಸೋಲ್ಡೌಟ್ ಆಗಿರುವುದನ್ನು ನೋಡಿದರೆ ಯಾವ ಮಟ್ಟಿಗೆ ಕ್ರೇಜ್ ಇದೆ ಎಂಬುದು ಗೊತ್ತಾಗುತ್ತದೆ.
ಇನ್ನು ಮೊದಲ ಶೋ ನೋಡಿದ ಸಿನಿರಸಿಕರು ಸಿನಿಮಾ ನಿರೀಕ್ಷೆಗಿಂತ ಉತ್ತಮವಾಗಿದೆ ಎಂದಿದ್ದಾರೆ.
PublicNext
14/04/2022 01:15 pm