ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಜಿಎಫ್‌-2 ಸುಲ್ತಾನ್ ಸಾಂಗ್ ಹೇಗಿದೆ ಗೊತ್ತೇ ?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರ ರಿಲೀಸ್‌ಗೆ ಒಂದೇ ದಿನ ಬಾಕಿ ಇದೆ. ಅದಕ್ಕೂ ಮುಂಚೇನೆ ಚಿತ್ರದ 'ಸುಲ್ತಾನ್' ಹಾಡು ರಿಲೀಸ್ ಆಗಿದೆ.

ರಾಕಿಂಗ್ ಸ್ಟಾರ್ ಯಶ್ ಪಾತ್ರ ರಾಕಿ ಭಾಯ್ ಎಂಟ್ರಿಯನ್ನ ಬಿಂಬಿಸೋ ಈ ಗೀತೆ ವಿಶೇಷವಾಗಿಯೇ ಇದೆ. ನಾಯಕ ಗತ್ತನ್ನ ಕಟ್ಟಿಕೊಡುವ ಈ ಹಾಡನ್ನ ಸಂಗೀತ ನಿರ್ದೇಶಕ ರವಿ ಬಸ್ರೂರು ಬರೆದು ಟ್ಯೂನ್ ಹಾಕಿದ್ದಾರೆ.

ಭಾರಿ ಪವರ್ ಫುಲ್ ಪದಗಳ ಈ ಹಾಡನ್ನ ಸಂತೋಷ್ ವೆಂಕಿ,ಸಚಿನ್ ಬಸ್ರೂರು,ಮೋಹನ್ ಕೃಷ್ಣ,ರವಿ ಬಸ್ರೂರು ಸೇರಿದಂತೆ ಎಲ್ಲರೂ ಹಾಡಿದ್ದಾರೆ. ರಿಲೀಸ್ ಆದ ಒಂದೇ ಗಂಟೆಯಲ್ಲಿಯೇ ಎಲ್ಲ ಭಾಷೆಯಲ್ಲೂ ಈ ಗೀತೆಯನ್ನ ಲಕ್ಷಕ್ಕೂ ಮೀರಿ ಹೆಚ್ಚಿನ ಜನ ವೀಕ್ಷಿಸಿದ್ದಾರೆ. ಚಿತ್ರದ ಬಗ್ಗೆನೂ ಭಾರೀ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದಾರೆ.

Edited By :
PublicNext

PublicNext

13/04/2022 04:44 pm

Cinque Terre

46.18 K

Cinque Terre

0