ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನೀರಿಕ್ಷಿತ ಚಿತ್ರ ಕೆಜಿಎಫ್-2 ಸಿನಿಮಾದ 2ನೇ ಹಾಡು ಬಿಡುಗಡೆಯಾಗಿದೆ. ಸದ್ಯ ಚಿತ್ರತಂಡ ತಾಯಿ ಸೆಂಟಿಮೆಂಟ್ ಹಾಡನ್ನು ಬಿಡುಗಡೆ ಮಾಡಿದೆ. ಗಗನ ನೀ, ಭುವನ ನೀ..ಎಂಬ ಸಾಲುಗಳಿಂದ ಆರಂಭವಾಗುವ ಹಾಡನ್ನು ರಿಲೀಸ್ ಮಾಡಿದ್ದು, ಇದು ಪ್ರತಿ ಅಮ್ಮಂದಿರ ಧ್ವನಿ ಎಂದು ಸಿನಿಮಾತಂಡ ಬಣ್ಣಿಸಿದೆ.
ಚಿತ್ರದ ಪಾರ್ಟ್-1ರಲ್ಲಿ ರಾಕಿ ಭಾಯ್ ಮತ್ತು ತಾಯಿ ಸೆಂಟಿಮೆಂಟ್ ಅಭಿಮಾನಿಗಳ ಹೃದಯತಟ್ಟಿತ್ತು. ಪಾರ್ಟ್-2ನಲ್ಲೂ ಅದು ಮುಂದುವರೆದಿದೆ ಎನ್ನುವುದು ಈ ಸಾಂಗ್ ನಿಂದ ಗೊತ್ತಾಗುತ್ತಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಿರುವ ಈ ಹಾಡು ಸುಚೇತಾ ಬಸ್ರೂರ್ ಧ್ವನಿಯಲ್ಲಿ ಮೂಡಿಬಂದಿದೆ. ಕಿನ್ನಲ್ ರಾಜ್ ಎನ್ನುವವರು ಆ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಈ ಹಾಡು ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಿದೆ.
ಏಪ್ರಿಲ್ 14ರಂದು ಸಿನಿಮಾ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಆ ಮೂಲಕ ಚಿತ್ರದ ಬಗೆಗಿನ ಎಲ್ಲಾ ಕುತೂಹಲ, ನಿರೀಕ್ಷೆಗಳಿಗೆ ತೆರೆ ಬೀಳಲಿದೆ.
PublicNext
06/04/2022 03:09 pm