ಮುಂಬೈ: ಬಾಲಿವುಡ್ ಸಲ್ಮಾನ್ ಖಾನ್ ಮಾಧ್ಯಮದ ಮೇಲೆ ಸದಾ ಸಿಟ್ಟು ಮಾಡಿಕೊಳ್ತಾರೆ. ಅದೇ ಸಿಟ್ಟು ಈ ಸೂಪರ್ ಸ್ಟಾರ್ ಒಮ್ಮೆ ಪತ್ರಕರ್ತನ ಫೋನ್ ಕಿತ್ತುಕೊಳ್ಳುವಂತೇನೂ ಮಾಡಿತ್ತು. ಆ ಒಂದು ಆಕ್ರೋಶದಿಂದಲೇ ಈಗ ಸಲ್ಮಾನ್ ಖಾನ್ ಬಾಂಬೆ ಕೋರ್ಟ್ ಮೆಟ್ಟಿಲೇರೋ ಹಂತಕ್ಕೆ ಬಂದು ತಲುಪಿದೆ.
ಹೌದು. 2019 ರಲ್ಲಿ ಸಲ್ಮಾನ್ ಖಾನ್ ಪತ್ರಕರ್ತನ ಪೋನ್ ಕಿತ್ತುಕೊಂಡಿದ್ದರು. ಆ ಒಂದು ಕಾರಣಕ್ಕೇನೆ ಇಂದು ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲವು ಕೋರ್ಟ್ ಗೆ ಹಾಜರಾಗುವಂತೆ ನೋಟೀಸ್ ನೀಡಿದೆ.
ಇದರಿಂದ ತಪ್ಪಿಸಿಕೊಳ್ಳಲು ಸಲ್ಮಾನ್ ಖಾನ್ ಈಗ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಪತ್ರಕರ್ತ ನೀಡಿದ ದೂರಿನ ಆಧಾರದ ಮೇಲೆ ಈಗ ಸಲ್ಮಾನ್ ಖಾನ್ ಸೇರಿದಂತೆ ಅಂಗರಕ್ಷಕ ನವಾಜ್ ಶೇಖ್ ಗೆ ಸಮನ್ಸ್ ಜಾರಿ ಮಾಡಲಾಗಿದೆ.
ಸಲ್ಮಾನ್ ಖಾನ್ ಯಾಕೆ ಪತ್ರಕರ್ತನ ಪೋನ್ ಕಿತ್ತುಕೊಂಡಿದ್ದರು ಅನ್ನೋದನ್ನ ಈಗ ಮತ್ತೆ ರಿಕಾಲ್ ಮಾಡಿಕೊಳ್ಳೊದಾದ್ರೆ, ಮುಂಬೈನ ಬೀದಿಯಲ್ಲಿ ಸಲ್ಮಾನ್ ಖಾನ್ ಸೈಕಲ್ ಸವಾರಿ ಮಾಡುತ್ತಿದ್ದರು. ಆಗ ಪತ್ರಕರ್ತ ಫೋಟೋ ತೆಗೆಯಲು ಮುಂದಾಗಿದ್ದರು. ಅದರಿಂದ ಕೋಪಗೊಂಡ ಸಲ್ಮಾನ್ ಆ ಪತ್ರಕರ್ತನ ಫೋನ್ ಕಿತ್ತುಕೊಂಡಿದ್ದರು.
PublicNext
05/04/2022 03:23 pm