ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕನ್ನಡಿಗರ 'ಇನ್' ಚಿತ್ರಕ್ಕೆ ಕಿಚ್ಚನ ಸಾಥ್-ಟೀಸರ್ ಕಂಡು ಭೇಷ್ ಎಂದ ಸುದೀಪ್

ಬೆಂಗಳೂರು:ಕನ್ನಡದ ನಟಿ ಪಾವನಾ ಅಭಿನಯದ ಇನ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಹೊಸಬರ ಈ ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್ ಕೊಟ್ಟಿದ್ದಾರೆ. ಚಿತ್ರದ ಟೀಸರ್‌ ಅನ್ನೂ ರಿಲೀಸ್ ಮಾಡಿದ್ದಾರೆ.

ದೇವೇಂದ್ರ ಬಡಿಗೇರ್ ನಿರ್ದೇಶದನ ಈ ಚಿತ್ರ ಭರವಸೆ ಮೂಡಿಸಿದೆ. ಶಂಕರ್ ಪಾಗೋಜಿ ಚಿತ್ರಕಥೆ ಸಂಭಾಷಣೆ ಬರೆದಿರೋ ಈ ಚಿತ್ರದ ಟೀಸರ್ ಈಗಲೇ ಕುತೂಹಲ ಮೂಡಿಸಿದೆ.

ನಟಿ ಪಾವನಾ ಈ ಹಿಂದೆ ದೇವೇಂದ್ರ ಬಡಿಗೇರ್ ನಿರ್ದೇಶನದ ರುದ್ರಿ ಚಿತ್ರದಲ್ಲಿ ಭಾರಿ ಗಮನ ಸೆಳೆದಿದ್ದರು. ಈಗ ಇನ್ ಮೂಲಕ ಮತ್ತೊಮ್ಮೆ ಕುತೂಹಲ ಮೂಡಿಸಿದ್ದಾರೆ. ಇವರ ಈ ಚಿತ್ರದ ಟೀಸರ್ ನೋಡಿ, ಕಿಚ್ಚ ಸುದೀಪ್ ಭೇಷ್ ಎಂದು ಹೇಳಿ ಕಳಿಸಿದ್ದಾರೆ.

Edited By :
PublicNext

PublicNext

04/04/2022 01:29 pm

Cinque Terre

61.53 K

Cinque Terre

0