ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ರಿಲೀಸ್ ದಿನ ಹತ್ತಿರಕ್ಕೆ ಬರ್ತಿದೆ. ಚಿತ್ರ ತಂಡವೂ ಭಾರಿ ಪ್ರಚಾರಕ್ಕೆ ಮುಂದಾಗಿದೆ. ಹತ್ತು ಹಲವು ರಾಜ್ಯಗಳಲ್ಲೂ ತಮ್ಮದೇ ರೀತಿಯಲ್ಲಿ ಪ್ರಚಾರ ಕೈಗೊಂಡಿದೆ.ವಿಶೇಷ ಅಂದ್ರೆ ದಿನೇ ದಿನೇ ಈ ಚಿತ್ರದ ಕ್ರೇಜ್ ಹೆಚ್ಚಾಗುತ್ತಿದೆ.
ಹೌದು. ಕೆಜಿಎಫ್-2 ಚಿತ್ರ ಏಪ್ರಿಲ್-14 ರಂದು ರಿಲೀಸ್ ಆಗುತ್ತಿದೆ. ಕರ್ನಾಟಕ ಸೇರಿದಂತೆ ಎಲ್ಲೆಡೆ ಸಿನಿಮಾ ರಿಲೀಸ್ ತಯಾರಿ ನಡೆದಿದೆ. ಕಟೌಟ್ ಗಳು ರೆಡಿ ಆಗುತ್ತಿವೆ.
ಚಿತ್ರದ ಪ್ರಚಾರಕ್ಕೆ ಚಿತ್ರ ತಂಡ ಎಲ್ಲೆಡೆ ಪ್ರವಾಸ ಮಾಡುತ್ತಿದೆ. ಇದರ ಹೊರತಾಗಿ ಕನ್ನಡದ ಕೆಜಿಎಫ್-2 ವಿದೇಶದಲ್ಲೂ ರಂಗೇರುತ್ತಿದೆ. ಯುಕೆದಲ್ಲಿ ಈ ಚಿತ್ರದ ಕ್ರೇಜ್ ತುಂಬಾನೆ ಇದೆ. ಇಲ್ಲಿ ಪ್ರೇಕ್ಷಕರು ಚಿತ್ರ ವೀಕ್ಷಣೆಗೆ ಈಗಾಗಲೇ ಟಿಕೆಟ್ ಬುಕ್ ಮಾಡಿಕೊಂಡು ಬಿಟ್ಟಿದ್ದಾರೆ.
ಇಷ್ಟೆಲ್ಲ ಕ್ರೇಜ್ ಇರೋ ಚಿತ್ರ ಭಾರಿ ಕುತೂಹಲ ಮೂಡಿಸಿದೆ. ಪಾರ್ಟ್-ಒನ್ ದಂತೆ ಪಾರ್ಟ್-2 ಏನೆಲ್ಲ ಕಮಾಲ್ ಮಾಡುತ್ತದೆ ಅನ್ನೋ ಲೆಕ್ಕಾಚಾರದಲ್ಲೂ ಸಿನಿಮಾ ಪಂಡಿತರಿದ್ದಾರೆ. ವೇಟ್ ಮಾಡಿ.
PublicNext
04/04/2022 07:30 am