ಬೆಂಗಳೂರು: ಕನ್ನಡದ ನಾಯಕ ನಟ ಚೇತನ್ ಈಗೊಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
ಟಿಪ್ಪು ಸುಲ್ತಾನ್ ಸ್ವಾತಂತ್ರ ಹೋರಾಟಗಾರ ಅಲ್ಲ ಅಂದ್ಮೇಲೆ ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಕೂಡ ಸ್ವಾತಂತ್ರ ಹೋರಾಟಗಾರರು ಅಲ್ಲವೇ ಅಲ್ಲ ಎಂದು ಚೇತನ್ ಹೇಳಿಕೆ ಕೊಟ್ಟಿದ್ದಾರೆ.
ಈಗಾಗಲೇ ಕರ್ನಾಟಕ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದೆ.ರೋಹಿತ್ ಚಕ್ರವರ್ತಿ ನೇತೃತ್ವದಲ್ಲೂ ಸಮಿತಿನೂ ರಚನೆ ಆಗಿದೆ. ಟಿಪ್ಪುವಿನ ವೈಭವೀಕರಣಕ್ಕೆ ಕತ್ತರಿ ಹಾಕುವಂತೆ ಈ ಸಮೀತಿ ಈಗ ಶಿಪಾರಸ್ಸು ಮಾಡಿದೆ.
ಮುಸ್ಲಿಂ ಆಗಿರೋ ಟಿಪ್ಪುವನ್ನ ಗುರಿಯಾಗಿಟ್ಟುಕೊಂಡು ಇತಿಹಾಸವನ್ನೂ ಹಿಂದುತ್ವಗೊಳಿಸಲಾಗುತ್ತಿದೆ. ಇದು ಸರಿ ಅಲ್ಲವೇ ಅಲ್ಲ.ಬ್ರಿಟೀಷರ ವಿರುದ್ಧ ಹೋರಾಡಿ ಯುದ್ಧ ಭೂಮಿಯಲ್ಲಿ ಮಡಿದ ಟಿಪ್ಪು ಸ್ವತಂತ್ರ ಹೋರಾಟಗಾರ ಅಲ್ಲವೇ ಅಲ್ಲ ಅಂದ್ಮೆಲೆ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಕೂಡ ಸ್ವತಂತ್ರ ಹೋರಾಟಗಾರರು ಅಲ್ಲವೇ ಅಲ್ ಅಂತಲೇ ಚೇತನ್ ಹೇಳಿದ್ದಾರೆ.
PublicNext
31/03/2022 01:21 pm