ಬೆಂಗಳೂರು: ಕನ್ನಡದ ಕೆಜಿಎಫ್ ಸಿನಿಮಾ ಭಾರಿ ಕ್ರೇಜ್ ಕ್ರಿಯೇಟ್ ಮಾಡಿದೆ. ಪಾರ್ಟ್-ಒನ್ ಸಿನಿಮಾ ಒಂದು ರೀತಿ ಕಿಚ್ಚು ಹೆಚ್ಚಿಸಿದೆ. ಪಾರ್ಟ್-2 ಇನ್ನೇನು ರಿಲೀಸ್‌ಗೂ ಕ್ಷಣಗಣನೆ ಶುರು ಆಗಿದೆ. ಇದರ ಬೆನ್ನಲ್ಲಿಯೇ ನಾಯಕ ನಟ ಯಶ್ ಸಂಭಾವನೆ ಎಷ್ಟು ಅನ್ನೋ ಕುತೂಹಲವೂ ಹೆಚ್ಚಾಗಿದೆ. ಬನ್ನಿ, ಹೇಳ್ತೀವಿ.
ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ನಿರ್ದೇಶಕ ಪ್ರಶಾಂತ್ ನೀಲ್,ನಟ ಸಂಜಯ್ ದತ್ ಇವರ ಸಂಭಾವನೆ ಬಗ್ಗೆ ಭಾರಿ ಕುತೂಹಲ ಇದೆ. ಅದರಂತೆ ಸದ್ಯ ಯಶ್ ಸಂಭಾವನೆ ವಿಷಯ ಈಗ ಹೊರ ಬಿದ್ದಿದೆ.
ಕೆಜಿಎಫ್ ಚಿತ್ರಕ್ಕಾಗಿಯೇ ಹೆಚ್ಚು ಕಡಿಮೆ ಮೂರರಿಂದ ನಾಲ್ಕು ವರ್ಷ ಮೀಸಲಿಟ್ಟಿದ್ದಾರೆ. ಆ ಲೆಕ್ಕದಂತೆ ಹೇಳೋದಾದ್ರೆ, ಹೆಚ್ಚು ಕಡಿಮೆ ಕೆಜಿಎಫ್-2 ಚಿತ್ರಕ್ಕಾಗಿಯೇ ಯಶ್ ಬರೋಬ್ಬರಿ 25 ರಿಂದ 30 ಕೋಟಿ ಸಂಭಾವನೆ ಪಡೆದಿದ್ದಾರೆ ಅನ್ನೋ ಮಾಹಿತಿ ಈಗ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಲೇ ಇದೆ.
PublicNext
30/03/2022 05:58 pm