ಪುಣೆ: ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಿಸಿ ಅನೇಕರು ಅನೇಕ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಚಿತ್ರವನ್ನ ವೀಕ್ಷಿಸಿ ಮೃತಪಟ್ಟಿರೋರು ಇಲ್ಲ ಬಿಡಿ.ಆದರೆ, ಇಂತಹ ಒಂದು ಘಟನೆ ಪುಣೆಯ ಚಿಂಚವಾಡದಲ್ಲಿ ಭಾನುವಾರ ನಡೆದಿದೆ.
ಕಾಶ್ಮೀರ್ ಸಿನಿಮಾ ನೋಡಿ, ಬ್ರೇನ್ ಸ್ಟ್ರೋಕ್‌ಗೆ ಒಳಗಾದ ಆ ವ್ಯಕ್ತಿಯ ಹೆಸರು ಅಭಿಜಿತ್ ಶಶಿಕಾಂತ್ ಶಿಂಧೆ (38) ಎಂದು ಗುರುತಿಸಲಾಗಿದೆ.
ಅಭಿಜಿತ್ ಹಿಂದೂ ಪರ ಸಂಘಟನೆಯಲ್ಲಿಯೇ ಇದ್ದೋರು.ಮಾರ್ಚ್-21 ರಂದು ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಿಸಿದ್ದರು. ಗೆಳೆಯರ ಜೊತೆಗೂ ಈ ಸಿನಿಮಾ ಬಗ್ಗೆ ಚರ್ಚಿಸಿದ್ದಾರೆ. ಮನೆಗೆ ತೆರಳಿ ಎಂದಿನಂತೆ ಮಲಗಿದ್ದಾರೆ. ಆದರೆ, ಬೆಳಗ್ಗೆ ಹೊತ್ತಿಗೆ ಅಭಿಜಿತ್ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಮೃತಪಟ್ಟಿದ್ದಾರೆಂದು ವರದಿ ಆಗಿದೆ.
PublicNext
29/03/2022 08:50 pm