ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯ್ ದೇವರಕೊಂಡ ಜೊತೆ ಮತ್ತೆ ಕೈ ಜೋಡಿಸಿದ ಪುರಿ ಜಗನ್ನಾಥ್

ಟಾಲಿವುಡ್ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಶನ್ ಸ್ಟಾರ್ ವಿಜಯ್ ದೇವರಕೊಂಡಗೆ ಮತ್ತೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬೋದ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಲೈಗರ್ ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ವಿಜಯ್ ಹಾಗೂ ಪುರಿ ಜಗನ್ನಾಥ್ ಜೋಡಿ JGM ಎಂಬ ಆಕ್ಷನ್ ಡ್ರಾಮಾ ಸಿನಿಮಾ ಉಣಬಡಿಸಲು ತಯಾರಾಗ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇವತ್ತು ಮುಂಬೈನಲ್ಲಿ ಅದ್ಧೂರಿಯಾಗಿ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಜನಗಣಮನ ಸಿನಿಮಾಗೆ ಮುನ್ನುಡಿ ಬರೆಯಲಾಯಿತು.

JGM ಸಿನಿಮಾ ಗೆ ಪುರಿ ಜಗನ್ನಾಥ್ ಚಿತ್ರಕಥೆ, ಡೈಲಾಗ್ ಬರೆದು ಆಕ್ಷನ್ ಕಟ್ ಹೇಳಲಿದ್ದು, ಪುರಿ ಕನೆಕ್ಟ್ ಹಾಗೂ ಶ್ರೀಕರ ಸ್ಟುಡಿಯೋ ಪ್ರೊಡಕ್ಷನ್ ನಡಿ ಚಾರ್ಮಿ ಕೌರ್, ವಂಶಿ ಪಡಿಪೆಲ್ಲಿ ಬಂಡವಾಳ ಹೂಡ್ತಿದ್ದು, ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ. ನಮ್ಮ ಮುಂದಿನ ಸಿನಿಮಾ JGM ಬಗ್ಗೆ ಮಾಹಿತಿ ಹಂಚಿಕೊಂಡಿರುವುದು ಖುಷಿಯಾಗ್ತಿದೆ. ವಿಜಯ್ ಜೊತೆ ಮತ್ತೆ ಕೈ ಜೋಡಿಸಿದ್ದೇನೆ. ಇದು ಪಕ್ಕಾ ಆಕ್ಷನ್ ಎಂಟರ್ ಟೈನರ್ ಸಿನಿಮಾವಾಗಿದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ಮಾಹಿತಿ ಹಂಚಿಕೊಂಡರು. ವಿದೇಶದ ನಾನಾ ಭಾಗಗಳಲ್ಲಿ ಶೂಟಿಂಗ್ ನಡೆಸಲು ಪ್ಲ್ಯಾನ್ ಹಾಕಿದ್ದು, ಎಪ್ರಿಲ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದೆ. ಆಕ್ಷನ್ ಎಂಟರ್ ಟೈನರ್ ಕಥಾನಕ ಹೊಂದಿರುವ JGM ಸಿನಿಮಾ ಆಗಸ್ಟ್ 3 2023 ವರ್ಲ್ಡ್ ವೈಡ್ ತೆರೆಗಪ್ಪಳಿಸಲಿದೆ.

Edited By :
PublicNext

PublicNext

29/03/2022 03:49 pm

Cinque Terre

39.82 K

Cinque Terre

0