ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ 2’ ಸಿನಿಮಾ ಬಿಡುಗಡೆಗೂ ಮುನ್ನ ಹವಾ ಸೃಷ್ಟಿಸಿದೆ. ಟ್ರೇಲರ್ ನೋಡಿ ಸಖತ್ ಥ್ರಿಲ್ ಆಗಿರುವ ಕೋಟ್ಯಾಂತರ ಅಭಿಮಾನಿಗಳು ನೋಡಲೇಬೇಕೆಂದು ಕಾದು ಕೂತಿರುವ ಈ ಸಿನಿಮಾ ಏಪ್ರಿಲ್ 14ಕ್ಕೆ ಹಿರಿತೆರೆ ಮೇಲೆ ವಿಜೃಂಭಿಸಲಿದೆ. ಈ ನಡುವೆ ರಾಕಿಭಾಯ್ ಪತ್ನಿ ರಾಧಿಕಾ ಪಂಡಿತ್ ಅವರು ಈಗಾಗಲೇ ಸಿನಿಮಾ ನೋಡಿದ್ದು ಪತಿಯ ನಟನೆಗೆ ಭೇಷ್ ಎಂದಿದ್ದಾರೆ.
ನಿನ್ನೆ ಭಾನುವಾರ ನಡೆದ ಟ್ರೇಲರ್ ರಿಲೀಸ್ ಇವೆಂಟ್‌ನಲ್ಲಿ ರಾಧಿಕಾ ಪಂಡಿತ್ ವೇದಿಕೆ ಮೇಲೆ ಬಂದು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನನ್ನ ಪತಿಯ ಸಿನಿಮಾ ಎಂದು ನಾನು ಹೊಗಳುತ್ತಿಲ್ಲ. ‘ಕೆಜಿಎಫ್’ ಎನ್ನುವ ಕಾರಣಕ್ಕೆ ನನಗೆ ಸಿನಿಮಾದ ಮೇಲೆ ಪ್ರೀತಿ ಇದೆ. ನಾನು ಚಿತ್ರವನ್ನು ವೀಕ್ಷಿಸಿದ್ದೇನೆ. ಸಿನಿಮಾವನ್ನು ನಾನು ನಿಜಕ್ಕೂ ಇಷ್ಟಪಟ್ಟೆ’ ಎಂದು ಹೇಳಿದ್ದಾರೆ. ಶ್ರೀನಿಧಿ ಶೆಟ್ಟಿ ಈ ಚಿತ್ರದಲ್ಲಿ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ. ರವೀನಾ ಟಂಡನ್ ಕೂಡ ಸಖತ್ ಪರ್ಫಾರ್ಮೆನ್ಸ್ ತೋರಿಸಿದ್ದಾರೆ. ಇನ್ನು ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಇದೇ ಮೊದಲ ಬಾರಿಗೆ ನಾನು ಈ ಲುಕ್‌ನಲ್ಲಿ ನೋಡಿದ್ದೇನೆ. ಅವರ ಇಡೀ ಅಪಿಯರೆನ್ಸ್ ಚಿತ್ರದಲ್ಲಿ ಅದ್ಭುತವಾಗಿ ಮೂಡಿಬಂದಿದೆ.
PublicNext
28/03/2022 04:27 pm