ಬೆಂಗಳೂರು:ವಿಕ್ರಾಂತ್ ರೋಣ ಚಿತ್ರ ತಂಡ ಕಿಚ್ಚನ ಅಭಿಮಾನಿಗಳ ಒತ್ತಡಕ್ಕೆ ಮಣಿದಿದೆ. ಏಪ್ರಿಲ್ ಮೊದಲ ವಾರದಲ್ಲಿಯೇ ಚಿತ್ರದ ಟೀಸರ್ ರಿಲೀಸ್ ಮಾಡಲು ಮುಂದಾಗಿದೆ.
ಸುದೀಪ್ ಅಭಿನಯದ ವಿಕ್ರಾಂತ ರೋಣ ಚಿತ್ರದ ಬಗ್ಗೆ ಭಾರಿ ಕುತೂಹಲ ಇದೆ. ಅಭಿಮಾನಿಗಳಂತೂ ಚಿತ್ರದ ರಿಲೀಸ್ ಗೆ ಕಾತರದಿಂದಲೇ ಕಾಯುತ್ತಿದ್ದಾರೆ. ಅದಕ್ಕೇನೆ ಚಿತ್ರ ಯಾವಾಗ ಬರುತ್ತದೆ. ಹೊಸ ಅಪ್‌ಡೇಟ್ ಏನ್ ಇದೆ. ಹೀಗೆ ಹಲವು ಪ್ರಶ್ನೆಗಳನ್ನ ಕಿಚ್ಚ ಸುದೀಪ್ ಅವರಿಗೆ ಟ್ವಿಟರ್‌ನಲ್ಲಿ ಕೇಳುತ್ತಲೇ ಇದ್ದರು.
ಅಭಿಮಾನಿಗಳ ಈ ಪ್ರಶ್ನೆಗಳನ್ನ ನಿರ್ಮಾಪಕ ಜಾಕ್ ಮಂಜು, ನಿರ್ದೇಶಕ ಅನೂಪ್ ಭಂಡಾರಿ ಅವರಿಗೂ ಕಿಚ್ಚ ಸುದೀಪ್
ಟ್ಯಾಗ್ ಮಾಡುತ್ತಿದ್ದರು. ಈ ಒಂದು ಪ್ರೀತಿಯ ಒತ್ತಾಯಕ್ಕೆ ಚಿತ್ರದ ನಿರ್ಮಾಪಕ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರದ ಟೀಸರ್ ರಿಲೀಸ್ ಮಾಡೋಕೆ ಡಿಸೈಡ್ ಮಾಡಿದ್ದಾರೆ. ಅದುವೇ ಈಗೀನ ವಿಕ್ರಾಂತ್ ರೋಣ ಚಿತ್ರದ ಅಪ್‌ಡೇಟ್.
PublicNext
25/03/2022 03:58 pm