ಎಸ್.ಎಸ್. ರಾಜಮೌಳಿ ನಿರ್ದೇಶನದ 'ರೌದ್ರ ರಣ ರುಧಿರ' (ಆರ್‌ಆರ್‌ಆರ್) ಚಿತ್ರವು ವಿಶ್ವದಾದ್ಯಂತ ಬರೋಬ್ಬರಿ 8000 ಸ್ಕ್ರೀನ್ಗಳಲ್ಲಿ ಗ್ರ್ಯಾಂಡಾಗಿ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ರಾತ್ರಿ 12 ಗಂಟೆಯಿಂದಲೇ ಮೊದಲ ಶೋ ಶುರುವಾಗಿದ್ದು, ಬೆಂಗಳೂರಿನ ಸುತ್ತಮುತ್ತ ಒಟ್ಟು 25ರಿಂದ 30 ಸ್ಕ್ರೀನ್ಗಳಲ್ಲಿ ಮಧ್ಯರಾತ್ರಿಯಿಂದಲೇ ಶೋ ಪ್ರಾರಂಭವಾಗಿದೆ. ಇಂದು ಬೆಳಗ್ಗೆ 4 ಗಂಟೆಯಿಂದ ಬಹಳಷ್ಟು ಕಡೆ ಮೊದಲ ಶೋ ಶುರುವಾಗಿದೆ. ಬೆಂಗಳೂರಿನಲ್ಲೊಂದೇ ದಿನಕ್ಕೆ 800ಕ್ಕೂ ಅಧಿಕ ಶೋ ಆಗುವ ಸಾಧ್ಯತೆಗಳಿವೆ.
'ಆರ್‌ಆರ್‌ಆರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸೋಕೆ ರೆಡಿ ಆಗಿದೆ. ಇನ್ನು ರಾಜ್ಯದ ನಾನಾ ಕಡೆಗಳಲ್ಲಿ ಈ ಸಿನಿಮಾದ ಪ್ರೀ-ಟಿಕೆಟ್ ಬುಕಿಂಗ್ ಜೋರಾಗಿ ಸಾಗುತ್ತಿದೆ. ಇನ್ನು, ತೆಲುಗು ಚಿತ್ರೋದ್ಯಮದ ಕೇಂದ್ರಬಿಂದು ಹೈದರಾಬಾದ್ನಲ್ಲಿ ಈ ಚಿತ್ರಕ್ಕೆ 1000ಕ್ಕೂ ಅಧಿಕ ಶೋಗಳು ಸಿಕ್ಕಿವೆ. ಇದರಲ್ಲಿ ಬಹುತೇಕ ಶೋನ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಸಿನಿಮಾ ಸೃಷ್ಟಿ ಮಾಡುತ್ತಿರುವ ಅಬ್ಬರ ನೋಡಿದರೆ ಒಳ್ಳೆಯ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ. ಗಳಿಕೆ ವಿಚಾರದಲ್ಲಿ ‘ಬಾಹುಬಲಿ 2’ ಸಿನಿಮಾ ದಾಖಲೆಯನ್ನು ಮುರಿದರೂ ಅಚ್ಚರಿ ಏನಿಲ್ಲ.
PublicNext
25/03/2022 07:22 am