ಬೆಂಗಳೂರು: 'ಜೇಮ್ಸ್' ಚಿತ್ರದ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಬಂದಿದ್ದೇವೆ. ಪುನೀತ್ ರಾಜ್‌ಕುಮಾರ್ ನನಗೆ ತಮ್ಮನ ತರಹ ಎಂದು ಸಿಎಂ ಹೇಳಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ ಎಂದಿದ್ದಾರೆ ಎಂದು ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಹೇಳಿದ್ದಾರೆ.
ಸಿಎಂ ಭೇಟಿಯ ಬಳಿಕ ಮಾತನಾಡಿದ ಅವರು, "ಜೇಮ್ಸ್ ಚಿತ್ರಕ್ಕೆ RRR ಸಿನಿಮಾದ್ದೇ ಸಮಸ್ಯೆ ಆಗಿದೆ. ಸುಮಾರು 25 ಲಕ್ಷ ರೂ. ಕಲೆಕ್ಷನ ಇರುವ ಥಿಯೇಟರ್‌ನಲ್ಲಿ ಜೇಮ್ಸ್ ತಗೆದು RRR ಹಾಕ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳಿಸಿದ್ದೇವೆ. ಜೇಮ್ಸ್ ಚಿತ್ರ ಆರಂಭದಲ್ಲಿ 386 ಥಿಯೇಟರ್‌ನಲ್ಲಿತ್ತು. ಈಗ ಅಂದ್ರೆ ನಾಳೆಯಿಂದ 275 ಥಿಯೇಟರ್‌ನಲ್ಲಿ ಜೇಮ್ಸ್ ಸಿನಿಮಾ ಇರಲಿದೆ ಎಂದು ತಿಳಿಸಿದರು.
PublicNext
24/03/2022 09:05 pm