ಮುಂಬೈ: ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಭಾರಿ ಗಳಿಕೆ ಮಾಡಿದೆ. ರಿಲೀಸ್ ಆದ 13 ದಿನಗಳಲ್ಲಿ ಸಿನಿಮಾ ಬರೋಬ್ಬರಿ 200 ಕೋಟಿ ಗಳಿಸಿ ಮುನ್ನುಗುತ್ತಿದೆ.
ವಿವೇಕ್ ಅಗ್ನಿ ಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಕಿಚ್ಚು ವಿಭಿನ್ನವಾಗಿಯೇ ಇದೆ. ಇಡೀ ದೇಶದಲ್ಲಿ ಈ ಚಿತ್ರದ ಚರ್ಚೆ ನಡೀತಾನೇ ಇದೆ.
ಭಾರಿ ಕ್ರೇಜ್ ಹುಟ್ಟುಹಾಕಿರೋ ದಿ ಕಾಶ್ಮೀರ್ ಫೈಲ್ಸ್ 200 ಕೋಟಿ ಗಳಿಕೆ ಮಾಡಿದೆ. ಈ ಹಿಂದೆ ಬಂದಿದ್ದ ಸೂರ್ಯವಂಶಿ ಚಿತ್ರದ 196 ಕೋಟಿ ಗಳಿಕೆಯ ದಾಖಲೆಯನ್ನೂ ಕಾಶ್ಮೀರ್ ಫೈಲ್ಸ್ ಬ್ರೇಕ್ ಮಾಡಿದೆ.
ವಿಶೇಷ ಅಂದ್ರೆ ರಿಲೀಸ್ ಆಗಿರೋ ಕೇವಲ 8 ದಿನಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಗಳಿಕೆಯಲ್ಲಿ 100 ಕೋಟಿ ಕ್ಲಬ್ ಸೇರಿ ಎಲ್ಲರ ಗಮನ ಸೆಳೆದಿತ್ತು.200 ಕೋಟಿ ಗಳಿಕೆ ಮಾಡೋ ಮೂಲಕ ಕೋವಿಡ್ ಟೈಮ್‌ನಿಂದ ಇಲ್ಲಿವರೆಗೂ ಅತಿ ಹೆಚ್ಚು ಗಳಿಕೆ ಮಾಡಿರೋ ಮೊಟ್ಟ ಮೊದಲ ಸಿನಿಮಾ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.
PublicNext
24/03/2022 01:30 pm