ನ್ಯೂಜರ್ಸಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜನ್ಮದಿನವನ್ನು ನ್ಯೂಜರ್ಸಿ ಕನ್ನಡಿಗರೂ ಆಚರಿಸಿದ್ದಾರೆ. ಇಲ್ಲಿಯೇ ಇರೋ ಪುನೀತ್ ಹಿರಿಯ ಮಗಳು ಧ್ರುತಿ ಈ ಕಾರ್ಯಕ್ರಮದ ಮುಖ್ಯ ಅತಿಥಿ ಆಗಿರೋದು ವಿಶೇಷ.
ಮೊನ್ನೆ ಶನಿವಾರ ನ್ಯೂಜರ್ಸಿಯ ಅಪ್ಪು ಅಭಿಮಾನಿಗಳ ಸಂಘ ನಾರ್ತ್ ಬನ್ಸ್ವಿಕ್ ಉದ್ಯಾನವನದಲ್ಲಿ ಜೇಮ್ಸ್ ಜಾತ್ರ ಮತ್ತು ಪುನೀತ್ ಹುಟ್ಟುಹಬ್ಬ ಆಚರಿಸಿತು.
ಅಮೆರಿಕಾದ ನಾನಾ ಕಡೆಯ ಅಪ್ಪು ಅಭಿಮಾನಿಗಳು ಇಲ್ಲಿಗೆ ಆಗಮಿಸಿದ್ದರು. ಧ್ರುತಿ ಈ ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದರು. ಪುನೀತ್ ವ್ಯಕ್ತಿತ್ವವನ್ನ ಧ್ರುತಿ ಮುಂದೆ ಎಲ್ಲರೂ ಕೊಂಡಾಡಿದರು.
PublicNext
22/03/2022 10:32 am