ಕೊಪ್ಪಳ : ಜಾತ್ರಾ ಮಹೋತ್ಸವ ಎಂದ ಮೇಲೆ ಭಕ್ತರು, ಗಣ್ಯರು ತಮ್ಮೂರ ಜಾತ್ರೆಗೆ ಸ್ವಾಗತ ಕೋರಲು ಫ್ಲೆಕ್ಸ್ ಹಾಕುವುದು ಮಾಮೂಲು. ಆದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಾಬಲಕಟ್ಟಿಯ ಶ್ರೀ ಶರಣಬಸವೇಶ್ವರ ಜಾತ್ರಾ ನಿಮಿತ್ತ ಗ್ರಾಮದಲ್ಲಿ ಹಲವು ಬ್ಯಾನರ್ ಗಳನ್ನು ಹಾಕಲಾಗಿದೆ.
ಸದ್ಯ ಗ್ರಾಮದಲ್ಲಿ ರಾರಾಜೀಸುತ್ತಿರುವ ಬ್ಯಾನರ್ ಗಳು ಗಮನ ಸೆಳೆಯುತ್ತಿವೆ. ಅಷ್ಟಕ್ಕೂ ಬ್ಯಾನರ್ ನಲ್ಲಿ ಇರುವುದು ಪಡ್ಡೆ ಹುಡುಗರ ನಿದ್ದೆ ಕದಿಯುವ ಬೆಡಗಿ ಸನ್ನಿ ಲಿಯೋನ್. ಹೌದು ಸನ್ನಿ ಲಿಯೋನ್ ಅಭಿಮಾನಿಗಳು ಸ್ವಾಗತ ಕೋರಿದ ಫ್ಲೆಕ್ಸ್ ಗಮನ ಸೆಳೆದಿವೆ. ಸದ್ಯ ಹಾಬಲಕಟ್ಟಿ ಗ್ರಾಮದಲ್ಲಿ ಜಾತ್ರೆಯ ನಿಮಿತ್ತ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಜಾತ್ರೆ ಹಾಗೂ ವಿವಾಹಕ್ಕೆ ಬರುವ ಜನರನ್ನು ಸನ್ನಿ ಲಿಯೋನ ಹೆಸರಲ್ಲಿ ಬ್ಯಾನರ್ ಹಾಕಿ ಸ್ವಾಗತ ಕೋರಲಾಗಿದೆ. ಒಟ್ಟಿನಲ್ಲಿ ನಾಡಿನಲ್ಲಿ ಸನ್ನಿಲಿಯೋನ್ ಅಭಿಮಾನಿಗಳಿದ್ದಾರೆ ಎನ್ನುವುದಕ್ಕೆ ಹಾಬಲಿಕಟ್ಟಿ ಗ್ರಾಮದ ಅಭಿಮಾನಿಗಳು ಸಾಕ್ಷಿಯಾಗಿದ್ದಾರೆ.
PublicNext
21/03/2022 10:57 pm