ದೆಹಲಿ: ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಸತ್ಯವನ್ನೇ ಹೇಳಿದ್ದಾರೆ. ಮಾನವೀಯತೆ ಇರೋ ಪ್ರತಿಯೊಬ್ಬ ಭಾರತೀಯನೂ ಈ ಚಿತ್ರ ನೋಡಲೇಬೇಕು. ನಾನು ಇನ್ನೂ ಈ ಚಿತ್ರವನ್ನ ವೀಕ್ಷಿಸಿಲ್ಲ. ಆದರೆ ಕಂಡಿತವಾಗಿಯೂ ನಾನು ಕಾಶ್ಮೀರ್ ಫೈಲ್ಸ್ ಚಿತ್ರ ನೋಡುತ್ತೇನೆ ಅಂತಲೇ ಬಾಲಿವುಡ್ ನಾಯಕ ನಟ ಆಮೀರ್ ಖಾನ್ ಹೇಳಿದ್ದಾರೆ.
ಕಾಶ್ಮೀರ್ ಪಂಡಿತ್‌ರ ಮೇಲೆ ದೌರ್ಜನ್ಯ ಆಗಿದೆ. ಆ ಸತ್ಯವನ್ನೇ ಚಿತ್ರದಲ್ಲಿ ತೋರಿದ್ದಾರೆ.ಪ್ರತಿಯೊಬ್ಬ ಭಾರತೀಯನೂ ಈ ಚಿತ್ರ ವೀಕ್ಷಿಸಲೇಬೇಕು ಅಂತಲೇ ಆಮೀರ್ ಸಲಹೆ ಕೊಟ್ಟಿದ್ದಾರೆ.
ರಾಜಮೌಳಿ ನಿರ್ದೇಶನದ ಟ್ರಿಪಲ್ ಆರ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಆಮೀರ್ ಖಾನ್ ಭಾಗಿ ಆಗಿದ್ದರು. ದೆಹಲಿಯಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿಯೇ ಆಮೀರ್ ದಿ ಕಾಶ್ಮೀರ್ ಫೈಲ್ಸ್ ಚಿತ್ರ ವೀಕ್ಷಿಸೋದಾಗಿಯೂ ಹೇಳಿಕೊಂಡಿದ್ದಾರೆ.
PublicNext
21/03/2022 03:31 pm