ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನಿನ್ನೆ ವಿಶ್ವದಾದ್ಯಂತ ತೆರೆಕಂಡಿದ್ದು ಸಿನಿರಸಿಕರ ಮನ ಗೆದ್ದಿದೆ. ಇನ್ನು ಈ ಚಿತ್ರ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದೆ.
ವಿಶ್ವದಾದ್ಯಂತ ಅಭೂತ ಪ್ರತಿಕ್ರಿಯೆ ಪಡೆಯುತ್ತಿರುವ ಚಿತ್ರ ಕಾಣಲು ಅಭಿಮಾನಿಗಳು ಕ್ಯೂ ನಿಂತು ಟಿಕೆಟ್ ಪಡೆದು ನೆಚ್ಚಿನ ನಾಯಕ ಸಿನಿಮಾ ನೋಡಿದ್ದಾರೆ. ಅದೇ ರೀತಿ ಸಿನಿಮಾದ ಗಳಿಕೆ ವಿಚಾರಕ್ಕೆ ಬರುವುದಾದರೆ ಮೊದಲ ದಿನವೇ 25 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಈ ಮೂಲಕ ಕನ್ನಡ ಸಿನಿಮಾರಂಗದಲ್ಲಿಯೇ ಹೊಸ ದಾಖಲೆ ಬರೆದ ಜೇಮ್ಸ್ ಮೊದಲ ವಾರವೇ 100 ಕೋಟಿ ಕ್ಲಬ್ ಸೇರುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.
PublicNext
18/03/2022 08:44 am