ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಪ್ಪು ಫ್ಯಾನ್ಸ್ ಗೆ ಚಿನ್ನದ ನಾಣ್ಯ- ಬಿಸಿ ಬಿಸಿ ಬಿರಿಯಾನಿ

ಬೆಂಗಳೂರು : ಇಂದು ಪುನೀತ್ ರಾಜ್ ಕುಮಾರ್ 47 ನೇ ವರ್ಷದ ಬರ್ತ್ಡೇ ಈ ದಿನವನ್ನು ಅಭಿಮಾನಿಗಳ ಜತೆಗೂಡಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅಪ್ಪು ನಮ್ಮೊಂದಿಗಿಲ್ಲ. ಅವರಿಲ್ಲ ಎಂಬ ನೋವಿನಲ್ಲೇ ಅಭಿಮಾನಿಗಳು ಬರ್ತ್ ಡೇ ಆಚರಿಸುತ್ತಿದ್ದಾರೆ. ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಸಿನಿಮಾ ತೆರೆಕಂಡಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ.

ಕರ್ನಾಟಕದಾದ್ಯಂತ ಸಾವಿರಾರು ಶೋಗಳು ಪ್ರದರ್ಶನ ಕಾಣುತ್ತಿವೆ. ಬೆಂಗಳೂರಿನಲ್ಲಷ್ಟೇ ಬರೋಬ್ಬರಿ 800ಕ್ಕೂ ಅಧಿಕ ಶೋ ಪ್ರದರ್ಶನಗೊಳ್ಳಲಿವೆ. ಇನ್ನು ಬೆಂಗಳೂರಿನ ಕಮಲಾನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಜೇಮ್ಸ್ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದ್ದು ಚಿತ್ರದ ವೀಕ್ಷಣಗೆ ಬಂದ ಪ್ರೇಕ್ಷರಿಗಾಗಿ ಅಪ್ಪು ಅಭಿಮಾನಿಗಳ ಸಂಘ ವಿಶೇಷ ವ್ಯವಸ್ಥೆ ಮಾಡಿದ್ದಾರೆ.

ಫಸ್ಟ್ ಶೋ ಗೆ ಬಂದ ಅಭಿಮಾನಿಗಳಿಗೆ ಕಾಫಿ,ಟೀ,ಶೋ ಮುಗಿದ ಬಳಿಕ ಮಸಾಲೆ ದೋಸೆ, ಮಧ್ಯಾಹ್ನ ಬಿಸಿ ಬಿಸಿ ಬಿರಿಯಾನಿ,ಸಂಜೆ ಸ್ನಾಕ್ಸ್ ಗಾಗಿ ಗೋಬಿ ಮಂಚೂರಿ ವಿತರಣೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಲಕ್ಕಿ ಡ್ರಾ ಮೂಲಕ 2 ಗ್ರಾಂ ಚಿನ್ನದ ನಾಣ್ಯ ಗಿಫ್ಟ್ ಸಹ ನೀಡಲಾಗಿದೆ.

Edited By : Nirmala Aralikatti
PublicNext

PublicNext

17/03/2022 09:19 am

Cinque Terre

61.7 K

Cinque Terre

9