ಕಲಬುರಗಿ : ಇಂದು ವಿಶ್ವದಾದ್ಯಂತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅಭಿನಯದ ಜೇಮ್ಸ್ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಮೊದಲ ದಿನದ ಮೊದಲ ಶೋ ನೋಡಲು ಚಿತ್ರ ಮಂದಿರಕ್ಕೆ ಬಂದ ಅಭಿಮಾನಿಗಳು ದೊಡ್ಡ ಪರದೆ ಮೇಲೆ ಪುನೀತ್ ಅವರನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಕಲಬುರಗಿ ನಗರದ ಸಂಗಮ ಚಿತ್ರಮಂದಿರದಲ್ಲಿ ಪವರ್ ಸ್ಟಾರ್ ಪುನಿತ್ ರಾಜಕುಮಾರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು ಅಪ್ಪು ಅಪ್ಪು ಎಂದು ಜೈಕಾರ ಕೂಗಿದರು.
ಮುಂಜಾನೆ 6.15 ಕ್ಕೆ ಆರಂಭವಾದ ಮೊದಲ ಶೋ ನೋಡಲು ಆಗಮಿಸಿದ ಅಭಿಮಾನಿಯೊಬ್ಬರು ಜೇಮ್ಸ್ ಚಿತ್ರ ಶುರುವಾಗ್ತಿದ್ದಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೀಸು ಅಪ್ಪು ಎಂದು ಕಣ್ಣೀರಾಗಿದ್ದಾರೆ. ಮನದಲ್ಲಿ ನೋವಿದ್ದರು ಅಪ್ಪು ಚಿತ್ರವನ್ನು ಅಭಿಮಾನಿಗಳು ಭರ್ಜರಿಯಾಗಿಯೇ ಬರಮಾಡಿಕೊಂಡಿದ್ದಾರೆ.
PublicNext
17/03/2022 08:51 am