ಬೆಂಗಳೂರು : ಪ್ರಾಣ ಬೆದರಿಕೆ, ಅಭದ್ರತೆ ಇರುವ ಕಾರಣ ನನಗೆ ಗನ್ ಮ್ಯಾನ್ ನೀಡಿ ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಮಾಡಿದ್ದಾರೆ. ‘‘ಗೌರಿ ಲಂಕೇಶ್ ಹತ್ಯೆಯಾದ ಬಳಿಕ ನನಗೆ ನಾಲ್ಕು ವರ್ಷದಿಂದ ಗನ್ ಮ್ಯಾನ್ ಕೊಟ್ಟಿದ್ದರು. ಮೊನ್ನೆ ಜೈಲಿಗೆ ಹೋದ ಬಳಿಕ ವಾಪಸ್ ಪಡೆದುಕೊಂಡಿದ್ದಾರೆ.
ಸತ್ಯ ವಾಸ್ತವ ಹೇಳುವ ನಮಗೆ ಗನ್ ಮ್ಯಾನ್ ಪ್ರೊಟೆಕ್ಷನ್ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದಾರೆ.
ಬೆದರಿಕೆ ಇಂಥದ್ದೇ ಮೂಲದಿಂದ ಬರುತ್ತಿದೆ ಎನ್ನಲಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಿಂದ ಸೇರಿದಂತೆ ಹಲವೆಡೆಯಿಂದ ಬರುತ್ತದೆ. ಇದರ ಒಂದು ಪಟ್ಟಿಯನ್ನು ನೀಡಲಾಗಿದೆ ಎಂದಿದ್ದಾರೆ.
PublicNext
15/03/2022 01:13 pm