13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ತಮ್ಮ ನಿರ್ಮಾಣ ಸಂಸ್ಥೆಯಿಂದ ತಯಾರಾದ ‘ಪೆದ್ರೊ’ ಸಿನಿಮಾಗೆ ಮನ್ನಣೆ ಸಿಗಲಿಲ್ಲ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಬೇಸರ ವ್ಯಕ್ತ ಪಡಿಸಿದ್ದರು. ಈ ಬಗ್ಗೆ ಅವರು ಲಿಖಿತ ಹೇಳಿಕೆಯನ್ನೂ ನೀಡಿದ್ದರು.
ಪೆದ್ರೊ ಸಿನಿಮಾಗೆ ಅನ್ಯಾಯವಾಗಿದೆ ಎಂದು ರಿಷಬ್ ಧ್ವನಿ ಎತ್ತುತ್ತಿದ್ದಂತೆಯೇ ಕನ್ನಡದ ಹಲವು ನಿರ್ದೇಶಕರು ಕೂಡ ರಿಷಬ್ ಶೆಟ್ಟಿ ಬೆಂಬಲಕ್ಕೆ ನಿಂತಿದ್ದರು. ಆದರೂ, ‘ಪೆದ್ರೊ’ಗೆ ಸ್ಥಾನ ಇಲ್ಲದ ಅಂತಾರಾಷ್ಟ್ರೀಯ ಚಿತ್ರೋತ್ಸವ ಐದು ದಿನಗಳಿಂದ ನಡೆಯುತ್ತಿದೆ. ಇಲ್ಲಿ ಮಾನ್ಯತೆ ಸಿಗದ ಚಿತ್ರಕ್ಕೆ 'ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವ'ಕ್ಕೆ ಆಯ್ಕೆಯಾಗಿದೆ.
ಇನ್ನೇನು ಸದ್ಯದಲ್ಲೇ ಶುರುವಾಗಲಿರುವ ಕೇರಳ ಇಂಟರ್ ನ್ಯಾಷಿನಲ್ ಫಿಲ್ಮ್ ಫೆಸ್ಟಿವೆಲ್ ಗೆ ‘ಪೆದ್ರೊ’ ಆಯ್ಕೆಯಾಗಿದೆ. ವರ್ಲ್ಡ್ ಸಿನಿಮಾ ವಿಭಾಗದಲ್ಲಿ 'ಪೆದ್ರೊ' ಪ್ರದರ್ಶನಗೊಳ್ಳಲಿದೆ.
PublicNext
07/03/2022 05:08 pm