ಬೆಂಗಳೂರು: ಕನ್ನಡದ ಕರಿಚಿರತೆ ದುನಿಯಾ ವಿಜಯ್ ಮತ್ತೊಂದು ಅವತಾರ್ ತಾಳಿದ್ದಾರೆ. ಭೀಮ ಹೆಸರಿನ ಚಿತ್ರದ ಮೂಲಕ ಭೀಮನಾಗಿ ಗಮನ ಸೆಳೆಯೋಕೆ ಸಜ್ಜಾಗಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಈಗ ರಿವೀಲ್ ಆಗಿದೆ.
ಸ್ವತಃ ದುನಿಯಾ ವಿಜಯ್ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಆಕ್ಷನ್ ಚಿತ್ರ ಅಂತಲೇ ಇದು ಅನಿಸಿದರೂ ಇದೊಂದು ಆಳವಾದ ವಿಷಯವನ್ನೇ ಹೊಂದಿದೆ.
ಸಲಗ ಚಿತ್ರ ತಂಡ ಇಲ್ಲೂ ಮುಂದುವರೆಯಲಿದೆ.ಮಾಸ್ತಿ ಡೈಲಾಗ್ ಬರೆಯುತ್ತಿದ್ದಾರೆ. ಚರಣ್ ರಾಜ್ ಸಂಗೀತ ಈ ಭೀಮನಿಗೂ ಇರಲಿದೆ.ಉಳಿದಂತೆ ಸದ್ಯ ವಿಜಯ್, ನಂದಮೂರಿ ಬಾಲಕೃಷ್ಣ ಅವರ ಎನ್‌ಬಿಕೆ 107 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
PublicNext
02/03/2022 10:36 pm