ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಯಿ ಪಲ್ಲವಿ ಸೋ ಕ್ಯೂಟ್.. ರಶ್ಮಿಕಾ ಮಂದಣ್ಣ

ಹೈದರಾಬಾದ್ : ಅಭಿಮಾನಿಗಳು ನಟ ನಟಿಯರನ್ನು ಹೊಗಳುವುದು ಸಾಮಾನ್ಯ. ಆದರೆ ಒಬ್ಬ ನಟಿ ಇನ್ನೊಬ್ಬ ನಟಿಯನ್ನು ಮೆಚ್ಚಿ ಹೊಗಳುವುದು ವಿಶೇಷ.

ಸದ್ಯ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಆಡವಾಳ್ಳು ಮೀಕು ಜೋಹರ್ಲು ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗೆ ಸಮಾರಂಭದಲ್ಲಿ ಸಾಯಿಪಲ್ಲವಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು. ಇದೇ ವೇಳೆ ಚಿತ್ರದ ನಾಯಕಿ ರಶ್ಮಿಕಾ, ಸಾಯಿ ಪಲ್ಲವಿಯನ್ನು ಕೊಂಡಾಡಿದ್ದಾರೆ.

ಈವರೆಗೂ ನೀವು ಏನೆಲ್ಲಾ ಮಾಡಿದ್ದೀರೋ ಅದೆಲ್ಲವನ್ನು ನೋಡಿದರೆ ಹೆಮ್ಮೆಯಾಗುತ್ತದೆ. ಆ ಕಾರಣಕ್ಕೆ ಇಷ್ಟೆಲ್ಲ ಪ್ರೀತಿಯನ್ನು ನೀವು ಗಳಿಸಿದ್ದೀರಿ. ನಿಮ್ಮ ಉಪಸ್ಥಿತಿಯಿಂದ ಈ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ಬಂದಿದೆ. ಸಾಯಿ ಪಲ್ಲವಿ ಅವರು ತುಂಬ ಕ್ಯೂಟ್ ಇದ್ದಾರಲ್ವಾ? ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಶರ್ವಾನಂದ್ ಮತ್ತು ರಶ್ಮಿಕಾ ಮಂದಣ್ಣ ಮೀಕು ಜೋಹಾರ್ಲು ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರ ಮಾರ್ಚ್ 4 ರಂದು ಬಿಡುಗಡೆಯಾಗುತ್ತಿದೆ.

Edited By : Nirmala Aralikatti
PublicNext

PublicNext

02/03/2022 04:51 pm

Cinque Terre

26.81 K

Cinque Terre

0