ಇಡೀ ದೇಶದಲ್ಲಿಯೇ ಕಚ್ಚಾ ಬದಾಮ್ ಹಾಡು ವೈರಲ್ ಆಗಿದೆ. ಇದನ್ನ ಹಾಡಿರೋ ಕಡಲೆ ಕಾಯಿ ವ್ಯಾಪಾರಿ ಈ ಮೂಲಕ ಸುದ್ದಿ ಆಗಿದ್ದಾರೆ. ಮ್ಯೂಸಿಕ್ ವೀಡಿಯೋದಲ್ಲೂ ಕುಣಿದು ಕುಪ್ಪಳಿಸಿದ್ದಾರೆ. ಆದರೆ ಮ್ಯೂಸಿಕ್ ವೀಡಿಯೋದಲ್ಲಿ ಕಾಣಿಸಿಕೊಂಡ ಈ ವ್ಯಪಾರಿಗೆ ಏನಾದರೂ ಆರ್ಥಿಕ ನೆರವು ಆಗಿದಿಯೇ ಅನ್ನೋ ಪ್ರಶ್ನೆ ಈಗ ಎದ್ದಿದೆ.
ಕಡಲೆ ಕಾಯಿ ವ್ಯಾಪಾರಿ ಭುವನ್ ಬಡ್ಯಾಕರ್ ವೈರಲ್ ಆಗಿದ್ದೇ ತಡ. ಗೋಧೂಳಿ ಬೇಲಾ ಮ್ಯೂಸಿಕ್ ಕಂಪನಿ ಭುವನ್ ಬಳಸಿಕೊಂಡು ಮ್ಯೂಸಿಕ್ ವೀಡಿಯೋ ಮಾಡಿಯೇ ಬಿಡ್ತು.
ಇದನ್ನ ಕಂಡ ಅನೇಕರು ವಾರೇ ವ್ಹಾ ಅಂದ್ರು. ಆದರೆ ಈ ವ್ಯಕ್ತಿಗೆ ದುಡ್ಡು ಕೊಟ್ಟರೇ ? ಇಲ್ಲವೇ ಹಾಗೆ ಕಳಿಸಿ ಬಿಟ್ಟರೇ ಅನ್ನೋ ಪ್ರಶ್ನೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ. ಅದಕ್ಕೆ ಮ್ಯೂಸಿಕ್ ಕಂಪನಿ ಉತ್ತರಿಸಿದೆ. 1.5 ಲಕ್ಷದ ಚೆಕ್ ನೀಡಲಾಗಿದೆ. ಬಾಕಿ ಒಂದೂರೆ ಲಕ್ಷವನ್ನ ಶೀಘ್ರವೇ ಕೊಡುತ್ತೇವೆ ಎಂದು ಹೇಳಿ ಎದ್ದಿರೋ ಪ್ರಶ್ನೆಗೆ ತೆರೆ ಎಳೆಯೊ ಕೆಲಸ ಮಾಡಿದೆ.
PublicNext
18/02/2022 08:28 pm