ಬೆಂಗಳೂರು : ಐಪಿಎಲ್ 15 ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯಾದರೂ ಗೆದ್ದೆ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿರುವ ಅಭಿಮಾನಿಗಳು ಐಪಿಎಲ್ ಆರಂಭಕ್ಕೆ ಕಾದುಕುಳಿತ್ತಿದ್ದಾರೆ. ಇದರ ಮಧ್ಯೆ ಕನ್ನಡದ ಚಿತ್ರ ಕೆಜಿಎಫ್ ಹೊಸ ಕ್ರೇಜ್ ಹುಟ್ಟುಹಾಕಿರುವಂತೆ ಆರ್ ಸಿಬಿ ತಂಡದಲ್ಲಿರುವ ಮೂವರು ಬ್ಯಾಟ್ಸ್ ಮ್ಯಾನ್ ಗಳಿಗೆ ಕೆಜಿಎಫ್ ಟೈಟಲ್ ನೀಡಲಾಗಿದೆ.
ಆರ್ ಸಿಬಿ ತಂಡದಲ್ಲಿರುವ ಕೆ.ಜಿ.ಎಫ್ ನ ಸ್ಟಾರ್ ಗಳಾಗಿ K – ಕೊಹ್ಲಿ, G – ಗ್ಲೇನ್ ಮ್ಯಾಕ್ಸ್ವೆಲ್, F – ಫಾಫ್ ಡು ಪ್ಲೆಸಿಸ್ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಕೂಡ ಈ ಕೆಜಿಎಫ್ ಸ್ಟಾರ್ ಗಳನ್ನು ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಈ ಫೋಟೋ ವೈರಲ್ ಆಗಿದೆ.
PublicNext
18/02/2022 06:21 pm