ಮುಂಬೈ: ಬಾಲಿವುಡ್ ನಾಯಕ ನಟ ಆಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚೆಡ್ಡಾ ಚಿತ್ರದ ರಿಲೀಸ್ ಡೇಟ್ ಮುಂದೆ ಹೋಗಿದೆ. ಅಲ್ಲಿಗೆ ಕೆಜಿಎಫ್-2 ಚಿತ್ರದ ರಿಲೀಸ್‌ಗೆ ಯಾವುದೇ ಸಿನಿಮಾ ಅಡ್ಡಿ ಇಲ್ಲದಂಗಾಗಿದೆ.
ಹೌದು. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರ ಏಪ್ರಿಲ್-14 ರಂದು ರಿಲೀಸ್ ಆಗುತ್ತಿದೆ. ಇದೇ ದಿನವೇ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗೋದಿತ್ತು. ಇದರಿಂದ ಒಂದೇ ದಿನ ಭಾರಿ ಫೈಟ್ ನಡೆಯಲಿದೆ ಅನ್ನೋ ನಿರೀಕ್ಷೆನೂ ಇತ್ತು.
ಆದರೆ ಈಗ ಅದು ಸುಳ್ಳಾಗಿದೆ. ಲಾಲ್ ಸಿಂಗ್ ಚೆಡ್ಡಾ ಚಿತ್ರದ ರಿಲೀಸ್ ಮೂರು ತಿಂಗಳು ಮುಂದಕ್ಕೆ ಹೋಗಿದೆ. ಅಂದ್ರೆ ಆಗಸ್ಟ್-14 ರಂದೇ ರಿಲೀಸ್ ಆಗುತ್ತಿದೆ.
ಚಿತ್ರದ ಒಂದಷ್ಟು ಕೆಲಸಗಳು ಬಾಕಿ ಇವೆ. ಈ ಕಾರಣಕ್ಕೆ ಚಿತ್ರದ ರಿಲೀಸ್ ಮುಂದೂಡಲಾಗಿದೆ ಅಂತಲೇ ಆಮೀರ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಇರೋ ಸತ್ಯವನ್ನ ಈಗಲೇ ಹೇಳಿ ಬಿಟ್ಟಿದ್ದಾರೆ.
PublicNext
16/02/2022 05:51 pm