ಮುಂಬೈ: ಗರ್ಭಿಣಿ ಗಾಯಕಿ ರಿಹಾನ್ನಾ ಬೋಲ್ಡ್ ಫೋಟೋಶೂಟ್ ಗೆ ನೆಟ್ಟಿಗರು ಗರಂ ಆಗಿದ್ದಾರೆ. ವಿಶ್ವ-ಪ್ರಸಿದ್ಧ ಗಾಯಕಿ ರಿಹಾನ್ನಾ ತಾಯಿಯಾಗುತ್ತಿರುವುದು ಸಂತಸದ ಸಂಗತಿ ಆದರೆ ಗರ್ಭಾವಸ್ಥೆಯಲ್ಲಿ ಈ ರೀತಿಯ ಬೋಲ್ಡ್ ಡ್ರೆಸ್ ಹಾಕಿಕೊಂಡು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.
ರಿಹಾನ್ನಾಳನ್ನು ಫ್ಯಾಶನ್ ಐಕಾನ್ ಎಂದು ಕರೆಯಲಾಗುತ್ತದೆ. ಆದರೆ ಈಗ ಅವರು ತಮ್ಮ ಗರ್ಭಾವಸ್ಥೆಯಲ್ಲಿಯೂ ಸಹ ಫ್ಯಾಷನ್ ಮುಂದುವರಿಸಿದ್ದು, ಅಭಿಮಾನಿಗಳಿಗೆ ಇರಿಸು ಮುರಿಸು ತಂದಿದೆ.
ಪ್ರಸ್ತುತ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಕಳೆದ ಎರಡು ವರ್ಷಗಳಿಂದ ರಿಹಾನ್ನಾ, ಅಸಪ್ ರಾಕಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಸದ್ಯ ಅಸಪ್ ಮಗುವಿಗೆ ತಾಯಿಯಾಗಲಿದ್ದಾರೆ.
PublicNext
14/02/2022 08:13 pm