ಭಾರತ ರತ್ನ, ಗಾನಕೋಗಿಲೆ ಲತಾ ಮಂಗೇಶ್ಕರ್ ನನ್ಮನ್ನು ಅಗಲಿದ್ದಾರೆ. ಆದ್ರೆ ತಮ್ಮ ಶಾರೀರದ ಮೂಲಕ ಅವರು ನಮ್ಮ ನಡುವೆ ಇನ್ನೂ ಕೂಡ ಜೀವಂತವಿದ್ದಾರೆ. ಈ ನಡುವೆ ಲತಾಜೀ ಅವರನ್ನು ಸ್ಮರಿಸಿಕೊಂಡ ಬಾಲಿವುಡ್ ನಟ ಸಲ್ಮಾನ್ ಖಾನ್, ಲತಾ ಮಂಗೇಶ್ಕರ್ ಅವರು ಹಾಡಿದ ಹಳೆಯ ಹಾಡೊಂದನ್ನು ಹಾಡಿ ಅವರನ್ನು ಸ್ಮರಿಸಿಕೊಂಡಿದ್ದಾರೆ.
1964ರಲ್ಲಿ ಬಿಡುಗಡೆಯಾದ ವೋ ಕೌನ್ ಥಿ? ಚಿತ್ರದ ಲಗ್ ಜಾ ಗಲೇ ಎಂಬ ಹಾಡನ್ನು ತನ್ಮಯರಾಗಿ ಹಾಡಿದ ಸಲ್ಮಾನ್ ಖಾನ್ ಅದರ ವಿಡಿಯೋವನ್ನು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ನಿಮ್ಮಂತವರು ಹಿಂದೆ ಇರಲಿಲ್ಲ...ಇನ್ಮುಂದೆಯೂ ನಿಮ್ಮಂತವರು ಸೃಷ್ಟಿಯಾಗಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.
PublicNext
13/02/2022 03:26 pm