ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೊನೆಯದಾಗಿ ಅಭಿನಯಿಸಿದ 'ಜೇಮ್ಸ್' ಚಿತ್ರದ ಮೊದಲ ಟೀಸರ್ ರಿಲೀಸ್ ಇಂದು ಬೆಳಗ್ಗೆ 11:15ಕ್ಕೆ ಆಗಲಿದೆ. ಪಿಆರ್‌ಕೆ ಆಡಿಯೋದಲ್ಲಿ ಈ ಟೀಸರ್ ರಿಲೀಸ್ ಆಗಲಿದ್ದು, ಬಹದ್ದೂರ್ ಚಿತ್ರ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಈ ಸಿನಿಮಾದ ಬಹುತೇಕ ಕೆಲಸಗಳನ್ನು ಮುಗಿಸಿದ್ದರು. ಆದರೆ, ಡಬ್ ಮಾಡಿರಲಿಲ್ಲ. ಅದಕ್ಕೂ ಮೊದಲೇ ಅವರು ನಿಧನರಾಗಿದ್ದು ದುರಾದೃಷ್ಟಕರ. ಹಾಗಾಗಿ ಅಪ್ಪುಗೆ ಶಿವರಾಜ್‌ಕುಮಾರ್ ಧ್ವನಿ ನೀಡಿದ್ದಾರೆ. ಅಪ್ಪು ನಿಧನದ ದುಃಖದಿಂದ ಕನ್ನಡಿಗರು ಇನ್ನೂ ಕೂಡ ಹೊರಬಂದಿಲ್ಲ. ಅಂದಹಾಗೆ, 'ಜೇಮ್ಸ್' ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.
PublicNext
11/02/2022 07:55 am