ದಾವಣಗೆರೆ: ಬೈಟು ಲವ್ ಸಿನಿಮಾ ಬಿಡುಗಡೆಗೆ ಡೇಟ್ ಫಿಕ್ಸ್ ಆಗಿದ್ದು, ಫೆ. 18ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.
ಬಜಾರ್ ಸಿನಿಮಾ ಖ್ಯಾತಿಯ ಧನ್ವೀರ್ ಹಾಗೂ ಕಿಸ್ ಬ್ಯೂಟಿ ಶ್ರೀಲೀಲಾ ನಟನೆಯ ಬೈಟು ಲವ್ ಸಿನಿಮಾದಲ್ಲಿ ನಟಿಸಿದ್ದು, ಹರಿಸಂತೋಷ್ ನಿರ್ದೇಶನ ಮಾಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ನಡಿ ನಿಶಾ ವೆಂಕಟ್ ಕೋಣಂಕಿ ಸಿನಿಮಾಕ್ಕೆ ನಿರ್ಮಾಣ ಮಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಇದ್ದರೆ, ಮಹೇನ್ ಸಿಂಹ ಛಾಯಾಗ್ರಹಣ,ಯೋಗಾನಂದ್ ಸಂಭಾಷಣೆ ಬರೆದಿದ್ದಾರೆ.
ಲೀಲು - ಬಾಲು ಟ್ರ್ಯಾಕ್ ಹಿಟ್, ಬೈಟು ಲವ್ ಸಿನಿಮಾದ ಏನಾದ್ರೂ ಅಂದ್ಕೊಂಡ್ಲಿ ಏನಂತೆ ಹಾಡು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸ್ತಿದೆ. ಧನ್ವೀರ್ ಹಾಗೂ ಶ್ರೀಲೀಲಾ ಅವರ ಮುದ್ದು ಮುದ್ದು ತುಂಟಾಟಗಳನ್ನೇ ಕೊರಿಯೋಗ್ರಫಿ ಮಾಡಲಾಗಿದೆ. ಅಜನೀಶ್ ಲೋಕನಾಥ್ ಸಂಗೀತ ಮಾನೋ ಕಂಠಸಿರಿಯಲ್ಲಿ ಮೂಡಿ ಬಂದಿರುವ ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ.
ನಟಿ ಶ್ರೀಲೀಲಾ ಮಾತನಾಡಿ ಮಲೆನಾಡು ಹುಡುಗಿ ಪಾತ್ರದಲ್ಲಿ ನಟಿಸಿದ್ದೇನೆ. ಬೈಟು ಲವ್ ಸಿನಿಮಾ ಕೇವಲ ಲವ್ ಮಾತ್ರ ಕಥೆ ಹೊಂದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಇಷ್ಟವಾಗಲಿದೆ. ಈ ಸಿನಿಮಾ ಕಥೆ ಕೇಳಿದ್ದು ನನ್ನ ತಾಯಿ. ಅವರಿಗೆ ಇಷ್ಟವಾದ ಬಳಿಕ ನಾನು ನಟಿಸಿದೆ. ಕಥೆ ಕೇಳಿ ನಾನು ಥ್ರಿಲ್ ಆಗಿದ್ದೆ. ತುಂಬಾ ಗಂಭೀರ ಪಾತ್ರದಲ್ಲಿ ನಟಿಸಿದ್ದೇನೆ. ಕಾಮಿಡಿ, ಸೆಂಟಿಮೆಂಟ್, ಲವ್ ಸೇರಿದಂತೆ ಎಲ್ಲಾ ಅಂಶಗಳೂ ಈ ಸಿನಿಮಾದಲ್ಲಿವೆ ಎಂದು ಹೇಳಿದರು.
PublicNext
09/02/2022 03:02 pm