ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ನಟ-ನಿರ್ದೇಶಕ ಚಿ.ಗುರುದತ್ ನಿರ್ದೇಶನದಲ್ಲಿಯೇ ರವಿಮಾಮಾ ಅಭಿನಯಸಲಿದ್ದಾರೆ.ಅಂದ್ಹಾಗೆ ಈ ಚಿತ್ರದ ಟೈಟಲ್ ವಿಶೇಷವಾಗಿಯೇ ಇದೆ.
ಕ್ರೇಜಿ ಸ್ಟಾರ್ ರವಿಚಂದ್ರನ್ ಒಪ್ಪಿಕೊಂಡ ಚಿತ್ರದ ಹೆಸರು "ರಮ್ಯ ರಾಮಸ್ವಾಮಿ" ವಿಶೇಷವಾಗಿದೇ ಅಲ್ವೇ. ಹಾ ! ಇದಕ್ಕೆ ಕಥೆ ಬರೆದವ್ರು ಜನಾರ್ದನ ಮಹರ್ಷಿ.ರಾಮಸ್ವಾಮಿ ಆಗಿ ರವಿಚಂದ್ರನ್ ಕಾಣಿಸಿಕೊಳ್ಳುತ್ತಿದ್ದಾರೆ.
ರಮ್ಯ ಪಾತ್ರವನ್ನ ಯಾರು ಮಾಡ್ತಾರೆ ಅನ್ನೋ ಕುತೂಹಲ ಇದೆ. ಅದನ್ನ ಸ್ಟಾರ್ ನಟಿಯೇ ಮಾಡ್ತಾರೆ ಅನ್ನೋ ಒಂದು ಹಿಂಟ್ ಕೂಡ ಸಿಕ್ಕಿದೆ. ಪುನೀತ್ ರಾಜಕುಮಾರ್ ಮ್ಯಾನೇಜರ್ ಆಗಿದ್ದ ಎನ್.ಎಸ್.ರಾಜಕುಮಾರ್ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ಬಾಕಿ ಮಾಹಿತಿ ಕೊಡ್ತಾ ಇರುತ್ತೇವೆ. ವೇಟ್ ಮಾಡಿ.
PublicNext
09/02/2022 08:11 am