ಬೆಂಗಳೂರು: ಪಾಟರಿಟೌನ್ ಮೆಟ್ರೋ ನಿಲ್ದಾಣಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ಇಡುವಂತೆ ಪ್ರಧಾನಿ ಕಾರ್ಯಾಲಯದಿಂದ ರಾಜ್ಯ ಸರ್ಕಾರಕ್ಕೆ ಸೂಚನೆ ಬಂದಿದೆ.
ಪಾಟರಿಟೌನ್ ಮೆಟ್ರೋ ನಿಲ್ದಾಣಕ್ಕೆ ಪುನೀತ್ ಹೆಸರು ಇರಿಸಿ ಪುನೀತ್ ಹೆಸರು ಚಿರಸ್ಥಾಯಾಗುವಂತೆ ಮಾಡಿ ಎಂದು
ಕರ್ನಾಟಕ ಬಹುಜನ ಫೆಡ್ರೇಷನ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿತ್ತು.
ಅದರಂತೆ ಈಗ ರಾಜ್ಯ ಸರ್ಕಾರ ನಗರದ ಗೊಟ್ಟಿಗೆರೆ-ನಾಗವಾರ ಮಾರ್ಗದಲ್ಲಿ ನಿರ್ಮಾಣ ಆಗುತ್ತಿರೋ ಪಾಟರಿಟೌನ್ ಮೆಟ್ರೋ ನಿಲ್ದಾಣಕ್ಕೆ ಪುನೀತ್ ಹೆಸರು ಇಡುತ್ತಿದೆ.
ರಾಜ್ಯ ಸರ್ಕಾರವೂ ಈ ಬಗ್ಗೆ ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ಮಾಡಲಿದೆ.
PublicNext
06/02/2022 09:08 pm