ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಪತಿ ಚಂದನ್ ಶೆಟ್ಟಿಗೆ ಕ್ಯಾರೆಟ್ ಹಲ್ವಾ ಮಾಡಿಕೊಟ್ಟು ವೈರಲ್ ಆಗಿದ್ದಾರೆ. ಅಡಿಗೇನೆ ಮಾಡೋಕೆ ಬರದಿರೋ ನಿವೇದಿತಾ,ಹಲ್ವಾ ಹೇಗೆ ಮಾಡಿದರು ಅನ್ನೋದೇ ವಿಶೇಷ. ಅದೇ ವೀಡಿಯೋ ಈಗ ವೈರಲ್ ಕೂಡ ಆಗಿದೆ.
ಚಂದನ್ ಶೆಟ್ಟಿಗೆ ಕ್ಯಾರೆಟ್ ಹಲ್ವಾ ಅಂದ್ರೆ ಪಂಚಪ್ರಾಣ. ಅದಕ್ಕೇನೆ ಬೇರೆ ಯುಟ್ಯೂಬ್ ಚಾನೆಲ್ ನೋಡಿ ನಿವೇದಿತಾ,ಕ್ಯಾರೆಟ್ ಹಲ್ವಾ ಮಾಡಿದ್ದಾರೆ. ಅದನ್ನ ಪತಿರಾಯ ಚಂದನ್ ಶೆಟ್ಟಿಗೂ ಕೊಟ್ಟಿದ್ದಾರೆ.
ಪತ್ನಿ ಮಾಡಿರೋ ಕ್ಯಾರೆಟ್ ಹಲ್ವಾ ಸವಿದು ಗಾಯಕ ಚಂದನ್ ಶೆಟ್ಟಿ ವಾರೇ ವ್ಹಾ ಅಂತಲೇ ಬಾಯಿ ಚಪ್ಪರಿಸಿದ್ದಾರೆ. ಈ ಎಲ್ಲ ಕ್ಷಣಗಳು ಕ್ಯಾಮೆರಾದಲ್ಲಿ ಕ್ಯಾಪ್ಚರ್ ಆಗಿವೆ. ಆ ವೀಡಿಯೋವನ್ನೇ ನಿವೇದಿತಾ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿದ್ದಾರೆ.
PublicNext
30/01/2022 05:31 pm