ಹೈದ್ರಾಬಾದ್:ಟಾಲಿವುಡ್‌ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸದ್ಯ ಪುಷ್ಪ ಗೆಲುವಿನ ಗುಂಗಿನಲ್ಲಿಯೇ ಇದ್ದಾರೆ. ಇದೇ ಹೊತ್ತಿನಲ್ಲಿಯೇ ಅಲ್ಲು ಅರ್ಜುನ್ ಹೊಸದೊಂದು ನಿರ್ಧಾರ ಮಾಡಿದ್ದಾರೆ. ಅದಕ್ಕಾಗಿಯೇ ಈಗ ದುಬೈಗೂ ಹಾರಿದ್ದಾರೆ.
ಅಲ್ಲು ಅರ್ಜುನ್ ಕಥೆ ಬರೆಯೋಕೆ ಪ್ಲಾನ್ ಮಾಡಿದ್ದಾರೆ. ಇದಕ್ಕಾಗಿಯೇ ದುಬೈಗೂ ಹಾರಿದ್ದಾರೆ. ಇಲ್ಲಿಯೇ ಕುಳಿತು ಅದ್ಭುತ ಕಥೆ ಬರೀತಾರಂತೆ ಅಲ್ಲು ಅರ್ಜುನ್.
ಅಂದ್ಹಾಗೆ ಈ ಹೊಸ ಕತೆಗೆ ಹೀರೋ ಯಾರೂ ಅನ್ನೋದು ಗೊತ್ತಿಲ್ಲ. ಸ್ವತಃ ಅಲ್ಲು ಅರ್ಜುನ್ ನಾಯಕರಾಗ್ತಾರೋ ಏನೋ ಅದು ಸದ್ಯಕ್ಕೆ ಸಸ್ಪೆನ್ಸ್. ಆದರೆ ಈ ಕಥೆ ಬರೆಯೋಕೆ ಹೋಗಿರೋ ಸುದ್ದಿ ಇದೆ ನೋಡಿ. ಇದು ಸೂಪರ್ ಡ್ಯೂಪರ್ ಆಗಿಯೇ ಹರಿದಾಡುತ್ತಿದೆ.
PublicNext
30/01/2022 04:48 pm