ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಕಟ್ಟೆ ರಾಮಚಂದ್ರ (75) ಇಂದು ಇಹಲೋಕ ತ್ಯಜಿಸಿದ್ದಾರೆ.
1947ರ ಫೆಬ್ರವರಿ 15ರಂದು ಜನಿಸಿದ ಕಟ್ಟೆ ರಾಮಚಂದ್ರ ಅವರು, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸ್ಯಾಂಡಲ್ವುಡ್ನಲ್ಲಿ ಸೇವೆ ಸಲ್ಲಿಸಿದ್ದಾರೆ. 'ಅರಿವು', 'ವೈಶಾಖದ ದಿನಗಳು' ಸಿನಿಮಾಗಳಿಂದ ಕಟ್ಟೆ ರಾಮಚಂದ್ರ ಅವರು ಖ್ಯಾತಿ ಪಡೆದಿದ್ದರು. ಸಾಹಸ ಸಿಂಹ ವಿಷ್ಣು ವರ್ಧನ್ ಅವರಿಗೆ ಕಟ್ಟೆ ರಾಮಚಂದ್ರ ಆಪ್ತರಾಗಿದ್ದರು.
ಕಟ್ಟೆ ರಾಮಚಂದ್ರ ಅವರು ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಇಂದು ಮುಂಜಾನೆ 5ರ ಸುಮಾರಿಗೆ ಅವರು ನಿಧನ ಹೊಂದಿದ್ದಾರೆ. ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
PublicNext
28/01/2022 03:23 pm