ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ದಕ್ಷಿಣ ಭಾರತದ ನಟರಾದ ರಾಕಿಂಗ್ ಸ್ಟಾರ್ ಯಶ್ ಮತ್ತು ಅಲ್ಲು ಅರ್ಜುನ್ ಅವರನ್ನು ಹಾಡಿ ಹೊಗಳಿದ್ದಾರೆ. ಅವರಿಬ್ಬರ 'ಕೆಜಿಎಫ್' ಮತ್ತು 'ಪುಷ್ಪ' ಚಿತ್ರದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವ ನಟಿ, ದಕ್ಷಿಣ ಚಲನಚಿತ್ರಗಳ ಯಶಸ್ಸು ಮತ್ತು ರಾಷ್ಟ್ರದಾದ್ಯಂತ ಅಲ್ಲಿನ ನಟರ ಜನಪ್ರಿಯತೆ ಹೆಚ್ಚಾಗಲು ಮೂರು ಕಾರಣವನ್ನು ತಿಳಿಸಿದ್ದಾರೆ.
"ದಕ್ಷಿಣ ಭಾರತ ಸಿನಿಮಾದ ಕಂಟೆಂಟ್ ಮತ್ತು ಸೂಪರ್‌ಸ್ಟಾರ್‌ಗಳು ಈ ಮಟ್ಟ ತಲುಪಲು ಕಾರಣಗಳೆಂದರೆ 1) ಅವರು ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದ್ದಾರೆ. 2) ಅವರು ತಮ್ಮ ಕುಟುಂಬಗಳನ್ನು ಪ್ರೀತಿಸುತ್ತಾರೆ ಮತ್ತು ಸಂಬಂಧಗಳು ಸಾಂಪ್ರದಾಯಿಕವಾಗಿವೆ ಹೊರತು ಪಾಶ್ಚಿಮಾತ್ಯವಲ್ಲ. 3) ಅವರ ವೃತ್ತಿಪರತೆ ಮತ್ತು ಉತ್ಸಾಹ ಸಾಟಿಯಿಲ್ಲದವು" ಎಂದು ನಟಿ ಕಂಗನಾ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, "ನಿಮ್ಮನ್ನು ಭ್ರಷ್ಟಗೊಳಿಸಲು ಬಾಲಿವುಡ್‌ಗೆ ಅವಕಾಶ ನೀಡಬಾರದು" ಎಂದು ಕಂಗನಾ ಹಿಂದಿ ಚಲನಚಿತ್ರೋದ್ಯಮದ ವಿರುದ್ಧವೇ ತಮ್ಮ ನಿಲುವು ತಿಳಿಸಿದ್ದಾರೆ. ಕಂಗಾನಾ ಹಂಚಿಕೊಂಡಿರುವ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
PublicNext
24/01/2022 02:51 pm