ಮುಂಬೈ: ಬಾಲಿವುಡ್ ನ ಹಾಟೆಸ್ ನಟಿ ಮಲೈಕಾ ಅರೋರಾ ತಮ್ಮ ಮಾದಕ ಉಡುಗೆಯೊಂದಿಗೆ ಮತ್ತೆ ಸುದ್ದಿ ಆಗಿದ್ದಾರೆ. ಇವರ ಬಟ್ಟೆಗಳನ್ನ ನೋಡಿ ಫುಲ್ ಖುಷ್ ಆಗೋರು ಇದ್ದಾರೆ. ನೋಡಿ, ನೋಡಿಯೇ ಕಾಮೆಂಟ್ ಹೊಡೆಯೋರೂ ಏನೂ ಕಮ್ಮಿ ಇಲ್ಲ. ಇಂತವರಿಗೆ ಸರಿಯಾಗಿಯೇ ಮಲೈಕಾ ಉತ್ತರ ಕೊಟ್ಟಿದ್ದಾರೆ.
ಮಲೈಕಾ ಹಳದಿ ಬಣ್ಣದ ವಿಶೇಷ ಉಡುಪು ಧರಿಸಿದ್ದಾರೆ. ಇದು ಜಾಸ್ತಿನೇ ಬೋಲ್ಡ್ ಆಗಿಯೇ ಇದೆ. ಮಲೈಕಾಗೆ ಇದು ಒಪ್ಪುತ್ತದೆ ಬಿಡಿ. ಆದರೆ ಇದನ್ನ ಕಂಡ ಕೆಲವ್ರು ಇದೇನಿದು ಡ್ರೆಸ್ ಅಂತಲೇ ಕಾಮೆಂಟ್ ಮಾಡಿದ್ದಾರೆ.
ಅದಕ್ಕೆ ಮಲೈಕಾ ಸುಮ್ಮನೆ ಕುಳಿತಿಲ್ಲ. "ಏನು ಧರಿಸಬೇಕು ಏನು ಧರಿಸಲೇಬಾರದು ಅನ್ನೋದು ನಮ್ಮ ಆಯ್ಕೆ.ಯಾವುದು ನನಗೆ ಹೊಂದುತ್ತೆ ಅನ್ನೋದನ್ನ ತಿಳಿಯದೇ ಇರೋವಷ್ಟು ದಡ್ಡಿ ನಾನಲ್ಲ ಅಂತಲೇ ಖಾರವಾಗಿಯೇ ಮಲೈಕಾ ಹೇಳಿ ಬಿಟ್ಟಿದ್ದಾರೆ.
PublicNext
24/01/2022 09:40 am