ಬಾಲಿವುಡ್‌ನ ಹಾಟ್ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ‘ಗೆಹರಾಯಿಯಾ’ ಹೊಸ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಅನೇಕ ಲಿಪ್ ಲಾಕ್ ಸೀನ್ಗಳು ಈ ಟ್ರೇಲರ್ನಲ್ಲಿ ಇವೆ. ಅದನ್ನು ನೋಡಿದ ದೀಪಿಕಾ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಈ ಹಿಂದೆ ಟೀಸರ್‌ನಲ್ಲಿಯೂ ಇದೇ ಅಂಶಗಳು ಹೈಲೈಟ್ ಆಗಿದ್ದವು. ಚಿತ್ರದಲ್ಲಿ ಈ ದೃಶ್ಯಗಳು ಯಾವ ಕಾರಣಕ್ಕಾಗಿ ಇವೆ ಎಂಬುದರ ಬಗ್ಗೆ ದೀಪಿಕಾ ಪಡುಕೋಣೆ ಸ್ಪಷ್ಟನೆ ನೀಡಿದ್ದಾರೆ.
ಸಂಬಂಧಗಳ ಸಂಕೀರ್ಣತೆಯ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಲಿದೆ. ಆಧುನಿಕ ಜಗತ್ತಿನಲ್ಲಿ ಸಂಬಂಧಗಳು ಯಾವ ರೀತಿ ಮಾರ್ಪಾಡು ಹೊಂದಿವೆ ಎಂಬುದನ್ನು ಈ ಚಿತ್ರ ತೋರಿಸಲಿದೆ. ಆ ಕಾರಣಕ್ಕಾಗಿ ಈ ಸಿನಿಮಾದಲ್ಲಿ ಇಂಥ ದೃಶ್ಯಗಳು ಸ್ಥಾನ ಪಡೆದುಕೊಂಡಿವೆ. ಎಂಗೇಜ್ ಮೆಂಟ್ ಮಾಡಿಕೊಂಡ ಯುವಕ, ಮದುವೆಯಾದ ಪರಸ್ತ್ರೀ ಜೊತೆ ಸಂಬಂಧ ಬೆಳೆಸುವ ಕಥೆ ಈ ಸಿನಿಮಾದಲ್ಲಿದೆ. ಈ ಪಾತ್ರವನ್ನು ನಿಭಾಯಿಸಲು ತಮ್ಮ ವೈಯಕ್ತಿಕ ಬದುಕಿನ ಕೆಲವು ಅಹಿತಕರ ಸಂದರ್ಭಗಳನ್ನು ನೆನಪು ಮಾಡಿಕೊಳ್ಳಬೇಕಾಯಿತು ಎಂದು ದೀಪಿಕಾ ಹೇಳಿದ್ದಾರೆ.
PublicNext
22/01/2022 03:05 pm