ಮುಂಬೈ:ಬಾಲಿವುಡ್ ಆಕ್ಟರ್ ವರುಣ್ ಧವನ್ ತುಂಬಾ ಬೇಸರದಲ್ಲಿಯೇ ಇದ್ದಾರೆ. ತಮ್ಮ ಜೀವನದಲ್ಲಿ ಎಲ್ಲವು ಆಗಿದ್ದ ಆ ಒಬ್ಬ ವ್ಯಕ್ತಿ ತೀರಿ ಹೋಗಿದ್ದಕ್ಕೆ ವರುಣ್ ದುಃಖ ಪಡುತ್ತಿದ್ದಾರೆ. ಆ ವ್ಯಕ್ತಿಯ ನೆನಪಿನಲ್ಲಿಯೇ ಈಗೊಂದು ವೀಡಿಯೋವನ್ನೂ ಶೇರ್ ಮಾಡಿದ್ದಾರೆ. ಬನ್ನಿ, ಹೇಳುತ್ತೇವೆ.
ವರುಣ್ ಧವನ್ ಕಾರ್ ಚಾಲಕ ಮನೋಜ್ ಸಾಹು ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಈ ವ್ಯಕ್ತಿಯ ಅಗಲಿಕೆಯಿಂದ ವರುಣ್ ಕೊಂಚ ಖಿನ್ನರಾಗಿದ್ದಾರೆ.
ಮನೋಜ್ ಕಳೆದ 26 ವರ್ಷದಿಂದ ನನ್ನ ಜೀವನದಲ್ಲಿದ್ದರು. ಜೀವನದ ಅವಿಭಾಜ್ಯ ಅಂಗವೇ ಆಗಿದ್ದರು. ಮನೋಜ್ ಇಲ್ಲದೇ ಇರೋದೇ ನನಗೆ ಅತೀವ ದುಃಖ ತಂದಿದೆ. ಹೀಗಂತ ಹೇಳಿರೋ ವರುಣ್ ಧವನ್,ಸೋಷಿಯಲ್ ಮೀಡಿಯಾದಲ್ಲಿ ಮನೋಜ್ ಜೊತೆಗಿನ ತಮ್ಮ ವಿಶೇಷ ಕ್ಷಣದ ಒಂದು ವೀಡಿಯೋ ಹಂಚಿಕೊಂಡಿದ್ದಾರೆ.
PublicNext
19/01/2022 09:48 pm