ಚೆನ್ನೈ: ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ನಟರು ಸೆಲೆಬ್ರಿಟಿಗಳು ತಮ್ಮ ದಾಂಪತ್ಯ ಬದುಕನ್ನು ಅಂತ್ಯಗೊಳಿಸಿಕೊಳ್ತಿದ್ದಾರೆ. ಈ ಪಟ್ಟಿಗೆ ಕಳೆದ ವರ್ಷ ನಟಿ ಸಮಂತಾ ಮತ್ತು ನಾಗಚೈತನ್ಯ ಸೇರಿಕೊಂಡಿದ್ದರು. ಇದೀಗ ಆ ಪಟ್ಟಿಗೆ ಧನುಷ್ ಮತ್ತು ಐಶ್ವರ್ಯಾ ಅಧಿಕೃತವಾಗಿ ದೂರವಾಗಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಪುತ್ರಿಯನ್ನು ಮದುವೆ ಮಾಡಿಕೊಂಡಿದ್ದ ಧನುಷ್ ದೂರವಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಈ ದಂಪತಿಗೆ ಇಬ್ಬರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್ ಹಾಗು ಐಶ್ವರ್ಯ 18 ವರ್ಷದ ದಾಂಪತ್ಯ ಪೂರೈಸಿದ್ದರು. 18 ವರ್ಷದಿಂದ ಇಬ್ಬರು ಅನ್ಯೋನ್ಯವಾಗಿದ್ದೆವು. ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಭಾಗಿ ಆಗಿದ್ದೆವು. ಸ್ನೇಹಿತರಾಗಿ, ದಂಪತಿಗಳಾಗಿ ಪೋಷಕರಾಗಿ ಜೀವನ ನಡೆಸಿದ್ವಿ. ಈಗ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಧನುಷ್ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
PublicNext
18/01/2022 07:42 am