ನಟ ನಿನಾಸಂ ಸತೀಶ್ ಸುಪ್ರಿತಾ ಅವರನ್ನು ಮದುವೆ ಆಗಿ ಮುದ್ದಾದ ಹೆಣ್ಣು ಮಗುವನ್ನು ಹೊಂದಿದ್ಧಾರೆ. ಮಗಳಿಗೆ 5 ವರ್ಷವಾಗಿದ್ದರು ಇದುವರೆಗೂ ಅವಳ ಫೋಟೋವನ್ನು ವೈರಲ್ ಮಾಡಿರಲಿಲ್ಲ.
ಆದ್ರೆ ಇಂದು ಸಂಕ್ರಾಂತಿಯ ದಿನದಂದು ಮುದ್ದಾದ ಮಗಳು ಮನಸ್ವಿತಾಳ ಕ್ಯೂಟ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಮನಸ್ವಿತಾಳಿಗೆ ಈಗ ಆರು ವರ್ಷ. ಈಗ ಅವರು ಹಂಚಿಕೊಂಡಿರುವುದು ಮಗಳಿಗೆ 1 ವರ್ಷವಿದ್ದಾಗ ತೆಗೆದಂತಹ ಫೋಟೋವನ್ನು. ಈ ಬಗ್ಗೆ ಸತೀಶ್ ಹೇಳಿದ್ದು ಹೀಗೆ
'ನಿಮಗೆಲ್ಲ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾಳೆ ನನ್ನ ಮಗಳು 'ಮನಸ್ವಿತಾ.. ಇದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಚಿತ್ರ. ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೂ ನಮ್ಮ ಕುಟುಂಬ, ಯಾವ ಚಿತ್ರಗಳನ್ನು ಹಂಚಿಕೊಂಡಿಲ್ಲ.
ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ. ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನಂತೆ ಸದಾ ಇರಲಿ. (ಇದು ಅವಳ ಮೊದಲ ವರ್ಷ ತೆಗೆದ ಚಿತ್ರ, ಈಗ ಅವಳು 5 ತುಂಬಿ 6ರ ಹೆಜ್ಜೆ ಇಡುತ್ತಿದ್ದಾಳೆ) ಧನ್ಯವಾದಗಳೊಂದಿಗೆ ಸುಪ್ರೀತಾ, ಮನಸ್ವಿತ, ಸತೀಶ್' ಎಂದು ಬರೆದುಕೊಂಡಿದ್ದಾರೆ.
PublicNext
14/01/2022 07:36 pm