ಬೆಂಗಳೂರು:ಕಿರು ತೆರೆ ನಟಿ ಅಮೃತಾ ನಾಯ್ಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ. ಮಗಳ ಸಾವಿನಿಂದ ಅಪ್ಪ ರೂಪೇಶ್ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಒಬ್ಬಳೇ ಮಗಳ ಅಗಲಿಕೆಯಿಂದ ದು:ಖಿಸುತ್ತಿರೋ ತಂದೆ ಶವಾಗಾರದ ಮುಂದೆ ನಿಂತು I am sorry ಚಿನ್ನಿ ಅಂತಲೇ ಕೇಳಿಕೊಳ್ತಿದ್ದಾರೆ. ತಂದೆಯ ಈ ಆಕ್ರಂದನ ಈಗ ಮುಗಿಲು ಮುಟ್ಟಿದೆ.
ಹೌದು ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋದಲ್ಲಿಯೇ ಅಮೃತಾ ನಾಯ್ಡು ಮತ್ತು ಮಗಳು ಸಮನ್ವಿ ಭಾಗವಹಿಸಿದ್ದರು. ಸೂಪರ್ ಆಗಿಯೇ ಆಡಿ ಎಲ್ಲರ ಹೃದಯ ಕದ್ದಿದ್ದರು.ಅಮ್ಮ ಗರ್ಭಿಣಿ ಅನ್ನೋ ಕಾರಣಕ್ಕೆ ಎಲಿಮಿನೇಟ್ ಕೂಡ ಆಗಿದ್ದಳು. ಆದರೆ, ನಿನ್ನೆಯ ದಿನ ಕೋಣನಕುಂಟೆ ರಸ್ತೆಯಿಂದ ವಾಜರಹಳ್ಳಿ ಕಡೆಗೆ ದ್ವಿ ಚಕ್ರವಾಹನದಲ್ಲಿ ಸಾಗುತ್ತಿರುವಾಗ, ಟಿಪ್ಪರ್ ಲಾರಿ ಇವರ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಇದರಿಂದ ತಾಯಿ ಗಂಭೀರ ಗಾಯಗೊಂಡಿದ್ದಾರೆ. ಮಗಳು ಸಮನ್ವಿ ಮೃತಪಟ್ಟಿದ್ದಾಳೆ.
ಮಗಳ ಸಾವಿನಿಂದ ಸಮನ್ವಿ ತಂದೆ ರೂಪೇಶ್ ಈಗ ತೀವ್ರ ದು:ಖದಲ್ಲಿಯೇ ಇದ್ದಾರೆ. ಒಬ್ಬಳೇ ಮಗಳ ಅಗಲಿಕೆಯಿಂದ ರೋಧಿಸುತ್ತಿದ್ದಾರೆ. ಪ್ರತಿ ಸಾರಿ I am sorry ಚಿನ್ನಿ ಅಂತಲೇ ಕೇಳಿಕೊಳ್ಳುತ್ತಿದ್ದಾರೆ.
PublicNext
14/01/2022 11:37 am