ಮುಂಬೈ:ತಮ್ಮ 83 ಚಿತ್ರವನ್ನ ಹಾಳು ಮಾಡಿ ಬಿಟ್ಟರು ಅಂತಲೇ ವಿಶ್ಲೇಷಕರ ವಿರುದ್ಧ ಬಾಲಿವುಡ್ ನಿರ್ದೇಶಕ ಕಬೀರ್ ಖಾನ್ ಈಗ ಕೆಂಡಾಮಂಡಲ ಆಗಿದ್ದಾರೆ.
ಚಿತ್ರದ ಕಲೆಕ್ಷನ್ ಅನ್ನ ಬೇರೆ ಬೇರೆ ಚಿತ್ರಗಳಿಗೆ ಹೋಲಿಕೆ ಮಾಡಲಾಗಿದೆ. ಮನಸೋಯಿಚ್ಛೆ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಚಿತ್ರದ ಕಲೆಕ್ಷನ್ ವಿಷಯ ಟ್ರೋಲ್ ಕೂಡ ಆಗಿದೆ. ಇದರಿಂದ ಚಿತ್ರದ ಮೇಲೂ ಪೆಟ್ಟು ಬಿದ್ದಿದೆ.
ವಿಶ್ಲೇಷಕರು ಯಾಕೆ ನನ್ನ ಚಿತ್ರದ ಕಲೆಕ್ಷನ್ ಅನ್ನ ಹೀಗೆ ಹೋಲಿಕೆ ಮಾಡಬೇಕಿತ್ತು ಅಂತಲೇ ಕೇಳಿ ಬೇಸರ ವ್ಯಕ್ತಪಡಿಸಿದ್ದಾರೆ ಕಬೀರ್ ಖಾನ್. ಅಂದ್ಹಾಗೆ ಚಿತ್ರ ಸೂಪರ್ ಆಗಿಯೇ ಇದೆ. ಆದರೆ ಕಲೆಕ್ಷನ್ ಇಲ್ಲವೇ ಇಲ್ಲ ಅನ್ನೋ ಮಾಹಿತಿ ಮೊದಲ ದಿನದಿಂದಲೂ ಕೇಳಿ ಬರ್ತಾನೇ ಇತ್ತು.
PublicNext
14/01/2022 10:52 am