ಬೆಂಗಳೂರು:ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಲುಕ್ ಇರೋ ಒಂದು ಫೋಟೊ ಭಾರಿ ವೈರಲ್ ಆಗುತ್ತಿದೆ. ಕ್ಯಾರವಾನ್ ನಲ್ಲಿ ತೆಗೆದಿರೋ ಈ ಫೋಟೋದಲ್ಲಿ ಶಿವರಾಜ್ ಕುಮಾರ್ ಫುಲ್ ಡ್ಯಾಶಿಂಗ್ ಆಗಿಯೇ ಕಾಣ್ತಿದ್ದಾರೆ.ಆದರೆ ಈ ಲುಕ್ ಯಾವ್ ಚಿತ್ರಕ್ಕೆ ಅಂತಿರೋ. ಬನ್ನಿ, ಹೇಳ್ತೀವಿ.
ಹೌದು. ಶಿವನ ಈ ಹೊಸ ಅವತಾರದ ಚಿತ್ರದ ಹೆಸರು ಬೈರಾಗಿ. ಡಾಲಿ ಧನಂಜಯ್ ಮತ್ತು ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದ ಬಹುತೇಕ ಚಿತ್ರೀಕರಣ ಆಗಿದೆ.
ಇನ್ನೇನು ಈ ವಾರದಲ್ಲಿಯೇ ಚಿತ್ರೀಕರಣವೂ ಪೂರ್ಣಗೊಳ್ಳಲಿದೆ.ಅದಕ್ಕೂ ಮೊದಲೇ ಬೈರಾಗಿ ಚಿತ್ರದ ಈ ಫೋಟೋ ಹಲ್ ಚಲ್ ಮಾಡುತ್ತಿದೆ. ತಮಿಳು ಸಿನಿಮಾಟೋಗ್ರಾಫರ್ ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರದಲ್ಲಿ ದಿಯಾ ಚಿತ್ರ ಖ್ಯಾತಿಯ ಪೃಥ್ವಿ ಅಂಬರ್ ಇದ್ದಾರೆ.ನಟಿ ಅಂಜಲಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
PublicNext
07/01/2022 02:42 pm